×
Ad

ಶಹಾಬಾದ್‌| ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪರಿಗೆ ಶ್ರದ್ಧಾಂಜಲಿ

Update: 2025-08-17 19:21 IST

ಕಲಬುರಗಿ: ಇತ್ತೀಚೆಗೆ ಲಿಂಗೈಕ್ಯರಾದ ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೆಯ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪರಿಗೆ ಶಹಾಬಾದ್‌ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಮಹಾಸಭಾದ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅರುಣ ಪಟ್ಟಣಕರ ಮತ್ತು ಮೃತ್ಯುಂಜಯ ಹಿರೇಮಠ ನವರು ಮಾತನಾಡಿ, ಕಲ್ಯಾಣ ಕರ್ನಾಟಕದ ನಾಡು ಮಹಾ ಪುರುಷನನ್ನು ಕಳೆದುಕೊಂಡಂತಾಗಿದೆ. ಅವರ ಶೈಕ್ಷಣಿಕ ಕ್ರಾಂತಿ, ದಾಸೋಹ ಹಾಗೂ ಸಮಾಜ ಸೇವೆಯನ್ನು ಇತಿಹಾಸದಲ್ಲಿ ಅಳಿಸಲಾಗದು. ಅಕ್ಷರ ಕ್ರಾಂತಿ ಮಾಡಿದ ಶ್ರೇಷ್ಠ ಶರಣ ಸಂತ ಅವರಾಗಿದ್ದಾರೆ, ಅವರ ಕುಟುಂಬಕ್ಕೆ ಮತ್ತು ಭಕ್ತರಿಗೆ ಭಗವಂತ ಧೈರ್ಯ ತುಂಬಲಿ ಎಂದು ಹೇಳಿ ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ರಾಜಶೇಖರ ಮರಗೋಳ, ಶರಣಬಸಪ್ಪ ಕೋಬಾಳ, ಸಿದ್ದಲಿಂಗಯ್ಯ ಹಿರೇಮಠ, ರವಿ ಅಲ್ಲಂಶೆಟ್ಟಿ, ರಾಜು ಕೋಬಾಳ, ಅಪ್ಪರಾವ ನಾಗಶೆಟ್ಟಿ, ಸಮಾಜದ ಅಧ್ಯಕ್ಷ ಭೀಮಾಶಂಕರ ಕುಂಬಾರ, ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಧನಶೆಟ್ಟಿ ಸೇರಿದಂತೆ ಸಮಾಜದ ಅನೇಕ ಗಣ್ಯರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News