×
Ad

ಶರಣಬಸವೇಶ್ವರ ಸಂಸ್ಥೆಯು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ಬಂದಿದೆ : ಡಾ.ಪುಟ್ಟಮಣಿ ದೇವಿದಾಸ

Update: 2025-03-02 22:38 IST

ಕಲಬುರಗಿ : ಶರಣಬಸವೇಶ್ವರ ಸಂಸ್ಥೆಯು ಸಂಸ್ಕಾರಯುಕ್ತ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬಂದಿದೆ ಎಂದು ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ತಿಳಿಸಿದರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ರವಿವಾರ ಪಾಲಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಿನ ಜೊತೆಗೆ ಉತ್ತಮ ಸಂಸ್ಕಾರ, ಆರೋಗ್ಯದ ಕಾಳಜಿ, ಉನ್ನತ ವಿಚಾರಗಳು, ಹೊಸ ಹೊಸ ಕೌಶಲ್ಯಗಳನ್ನು ತಿಳಿದುಕೊಳ್ಳುತ್ತಾರೆ. ಮಕ್ಕಳಿಗೆ ಪ್ರತಿಯೊಂದು ಸೌಲಭ್ಯಗಳು ಒದಗಿಸಿಕೊಡುತ್ತಿದ್ದಾರೆ. ಮಹಾವಿದ್ಯಾಲಯದ ಶಿಕ್ಷಕರು ಗುಣಮಟ್ಟ ಮತ್ತು ಸಮರ್ಪಣಭಾವದಿಂದ ಮಕ್ಕಳಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಶಿಕ್ಷಕರಷ್ಟೇ ಅಲ್ಲದೆ ಪಾಲಕರು ಸಹ ತಮ್ಮ ಮಕ್ಕಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಬೇಕು. ಅವರ ಚಲನವಲಗಳ ಮೇಲೆ ನಿಗಾವಹಿಸಬೇಕು, ಆರೋಗ್ಯದ ಕಾಳಜಿವಹಿಸಬೇಕು. ಮೌಲ್ಯಾಧಾರಿತ ಗುಣಗಳನ್ನು ಬೆಳೆಸಬೇಕು. ಉತ್ತಮ ನಾಗರಕರನ್ನಾಗಿ ರೂಪಿಸಬೇಕು ಸಲಹೆ ನೀಡಿದರು.

ಪಾಲಕರಾದ ಗುಂಡಣ್ಣ ಡಿಗ್ಗಿ, ರಾಜಕಿಶೋರ ಪಾಟೀಲ ಮತ್ತು ನಾನಾಗೌಡ ಅವರು ಮಾತನಾಡಿದರು.

ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಸೀಮಾ ಪಾಟೀಲ ಪ್ರಾಸ್ತಾವಿಕ ಮತನಾಡಿದರು, ಪ್ರಾಧ್ಯಾಪಕ ಡಾ.ಶಾಂತಲಿಂಗ ಸ್ವಾಗತಿಸಿದರು, ಪ್ರಸಾದ ಅಷ್ಟಗೀಕರ ನಿರೂಪಿಸಿದರೆ, ಸಂತೋಷಿ ಶಿರವಾಳ ವಂದಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News