×
Ad

ಕಲಬುರಗಿ| 5.55 ಲಕ್ಷ ಮೌಲ್ಯದ ಗಾಂಜಾ ಜಪ್ತಿ; 6 ಮಂದಿ ಆರೋಪಿಗಳ ಬಂಧನ

Update: 2025-06-18 22:20 IST

ಬಂಧಿತ ಆರೋಪಿಗಳು

ಕಲಬುರಗಿ: ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ 4 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿ, ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿ ಅವರ ಬಳಿ 5,55,000 (5.55 ಲಕ್ಷ) ಮೌಲ್ಯದ 6 ಕೆಜಿ 34 ಗ್ರಾಂ ನಿಷೇಧಿತ ಗಾಂಜಾ ಹಾಗೂ 2,300 ನಗದು ಹಣ ವಶಪಡಿಸಿಕೊಳ್ಳುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಹೀರಪೂರ ನಿವಾಸಿ ಜೈಭಿಮ್ ಮಲ್ಲಿಕಾರ್ಜುನ್ ಬಂಡನಾಕಾರ್(35), ರೋಜಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯಾದುಲ್ಲಾ ಕಾಲೋನಿಯ ನದೀಮ್ ಪಾಶಾ(30) ಮತ್ತು ಯಾದುಲ್ಲಾ ಕಾಲೋನಿಯ ಮುಹಮ್ಮದ್ ಇರ್ಷಾದ್ (24), ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಜಾದಪುರ ರಸ್ತೆಯ ನಿವಾಸಿ ಅಬು ಶೇಖ್(30) ಮತ್ತು ಬಷೀರ್ ಖಾನ್(25), ಚೌಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೇಖ್ ರೋಜಾ ಪ್ರದೇಶದ ಮೊಹಮ್ಮದ್ ಚಾಂದ್ ಭಗವಾನ್(24) ಬಂಧಿತ ಆರೋಪಿಗಳಾಗಿದ್ದು, ಸದ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದರಿ ದಾಳಿಯನ್ನು ಯಶಸ್ವಿಯಾಗಿ ಕೈಗೊಂಡಿರುವ ಪೊಲೀಸ್ ಅಧಿಕಾರಿ, ಸಿಬ್ಬದಿಂದಿಯವರನ್ನು ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ ಅವರು ಶ್ಲಾಘಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News