×
Ad

ಒಳ ಮೀಸಲಾತಿಯಿಂದ ಕಲ್ಯಾಣ ಕರ್ನಾಟಕಕ್ಕೆ ಶಿಕ್ಷಕರ ನೇಮಕಾತಿ ವಿಳಂಬ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

Update: 2025-05-10 18:23 IST

ಡಾ.ಶರಣಪ್ರಕಾಶ್‌ ಪಾಟೀಲ್‌

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಈಗಾಗಲೆ 5,530 ಶಿಕ್ಷಕರ ನೇಮಕಾತಿಯಾಗಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ ಕಾರಣ ವಿಳಂಬವಾಗಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಹೇಳಿದರು.

ಶನಿವಾರ ಕಲಬುರಗಿಯ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸೆಸೆಲ್ಸಿ ಫಲಿತಾಂಶ ಕುಸಿಯಲು ಶಿಕ್ಷಕರ ಕೊರತೆಯೆ ಪ್ರಮುಖ ಕಾರಣ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಒಳ ಮೀಸಲಾತಿ ಸಮೀಕ್ಷೆ ನಂತರ ಶಿಕ್ಣಕರ ನೇಮಕಾತಿಯಾಗಿ ಸಮಸ್ಯೆ ಬಗೆಹರಿಯಲಿದೆ. ಖಾಯಂ ಶಿಕ್ಣಕರು ಇಲ್ಲದಕ್ಕಾಗಿಯೇ ಅತಿಥಿ ಶಿಕ್ಷಕರ ನೇಮಕಾತಿಯಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸಕ್ತ 2025-26ನೇ ಆರ್ಥಿಕ ಸಾಲಿಗೆ 5,000 ಕೋಟಿ ರೂ. ಅನುದಾನ ನೀಡಿದ್ದು, ಈ ಅನುದಾನ ಸಮರ್ಪಕ ಖರ್ಚು ಮಾಡಲು ಕೂಡಲೆ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನ ತರಲು ಕೆಲಸ ಕಾರ್ಯಗಳಿಗೆ ಚಾಲನೆ ನೀಡಲು ಇಂದು ಮಂಡಳಿ ಸಭೆ ಕರೆಯಲಾಗಿದೆ ಎಂದರು.

ಇನ್ನೂ ಮಂಡಳಿಯಿಂದಲೇ ಪ್ರತ್ಯೇಕ ಇಂಜಿನೀಯರಿಂಗ್ ವಿಂಗ್ ಸ್ಥಾಪನೆ ಕುರಿತಂತೆ ಮಾತನಾಡಿದ ಸಚಿವರು, ಮಂಡಳಿಯಿಂದ ವಿಂಗ್ ಅದು ಮತ್ತೊಂದು ಇಲಾಖೆಯಾಗಿ ಹೊರಹೊಮ್ಮುತ್ತೆ ವಿನ: ಸಮಸ್ಯೆಗೆ ಅದುವೇ ಮುಕ್ತಿ ಅಲ್ಲ. ಪ್ರಸ್ತುತ ಇರುವ ಲೋಕೋಪಯೋಗಿ, ಅರ್.ಡಿ.ಪಿ.ರ್., ನಿರ್ಮಿತಿ ಕೇಂದ್ರ, ಲ್ಯಾಂಡ್ ಆರ್ಮಿ ಸೇರಿದಂತೆ ಎಲ್ಲಾ ಇಲಾಖೆಗಳನ್ನು ಬಳಸಿಕೊಂಡಲ್ಲಿ ಕೆಲಸದ ವೇಗ ಹೆಚ್ಚಲಿದೆ. ಹೀಗಾಗಿ ಎಲ್ಲಾ ಇಲಾಖೆಗಳಿಗೆ ಕೆಲಸ ಹಂಚಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ, ಕೆ.ಕೆ.ಅರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕ ತಿಪ್ಪಣ್ಣಪ್ಪ ಕಮಕನೂರ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣು ಮೋದಿ, ಮುಖಂಡ ನೀಲಕಂಠ ಮೂಲಗೆ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News