×
Ad

ಕಲಬುರಗಿ| ಕುಡಿತದ ಚಟ ಬಿಡಿಸಲು ನೀಡಿದ ನಾಟಿ ಔಷಧ ಸೇವಿಸಿ ಮೂವರು ಮೃತ್ಯು; ಓರ್ವನ ಸ್ಥಿತಿ ಗಂಭೀರ

Update: 2025-08-06 21:37 IST

ಕಲಬುರಗಿ: ಕುಡಿತದ ಚಟ ಬಿಡುವುದಕ್ಕಾಗಿ ನಾಟಿ ಔಷಧ ಸೇವಿಸಿದ ಮೂವರು ಮೃತಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಸೇಡಂ ತಾಲೂಕಿನ ಇಮಡಾಪೂರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಸೇಡಂ ತಾಲೂಕಿನ ಬುರುಗಪಲ್ಲಿ ಗ್ರಾಮದ ಲಕ್ಷ್ಮೀ ನರಸಿಂಹಲು(45), ಶಹಬಾದ ಪಟ್ಟಣದ ಗಣೇಶ ಬಾಬು ರಾಠೋಡ (24) ಹಾಗೂ ಮದಕಲ್ ಗ್ರಾಮದ ನಾಗೇಶ ಭೀಮಶಪ್ಪ ಗಡಗು (25) ಮೃತರು. ಲಕ್ಷ್ಮೀ ನರಸಿಂಹಲು ಅವರ ಪುತ್ರ ನಿಂಗಪ್ಪ ನರಸಿಂಹಲು ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಮಡಪೂರ ಗ್ರಾಮದಲ್ಲಿ ಫಕೀರಪ್ಪ ಅಲಿಯಾಸ್ ಮುತ್ಯಾ ಎನ್ನುವ ವ್ಯಕ್ತಿ ಕಳೆದ ಕೆಲವು ವರ್ಷಗಳಿಂದ ಕುಡಿತದ ಚಟ ಬಿಡಿಸಲು ನಾಟಿ ಔಷಧಿ ಕೊಡುತ್ತಿದ್ದನು ಎನ್ನಲಾಗಿದೆ. ಅದರಂತೆ ಬುಧವಾರದಂದು ನಾಲ್ಕು ಜನರಿಗೆ ಕುಡಿತ ಬಿಡಿಸುವ ಔಷಧಿಯನ್ನು ನೀಡಿದ್ದಾನೆ. ಆದರೆ ಆ ಔಷಧಿ ಸೇವಿಸಿದ ನಾಲ್ವರು ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದು ದೃಢಪಟ್ಟಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

ಈ ಕುರಿತು ಸೇಡಂ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಔಷಧಿ ನೀಡಿದ ಫಕೀರಪ್ಪ ತಲೆ ಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಶೋಧ  ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News