×
Ad

ಬೂಕರ್ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ಕನ್ನಡ ಸಾಹಿತಿ ಬಾನು ಮುಷ್ತಾಕ್ ಕೃತಿ

Update: 2025-02-26 07:45 IST

ಲಂಡನ್: ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ಸಣ್ಣಕತೆಗಳ ಅನುವಾದಿತ ಸಂಕಲನ ‘ಹಾರ್ಟ್ ಲ್ಯಾಂಪ್’ ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಬೂಕರ್ ಪುರಸ್ಕಾರಕ್ಕೆ ಪರಿಗಣನೆಗೆ ಸಿದ್ಧವಾಗಿರುವ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.

ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕಥಾಸಂಕಲನವನ್ನು ದೀಪಾ ಭಸ್ತಿ ಅವರು ‘ಹಾರ್ಟ್ ಲ್ಯಾಂಪ್’ ಶೀರ್ಷಿಕೆ ಯೊಂದಿಗೆ ಇಂಗ್ಲಿಷ್‌ಗೆ ಅನುವಾದಿಸಿದ್ದರು.

ಕನ್ನಡ ಭಾಷೆಯ ಕೃತಿಯೊಂದು ಬೂಕರ್ ಸ್ಪರ್ಧೆಗೆ ಪ್ರವೇಶ ಪಡೆದಿರುವುದು ಇದೇ ಮೊದಲ ಬಾರಿ. ಕುಟುಂಬ ಹಾಗೂ ಸಮುದಾಯದ ತುಮುಲಗಳನ್ನು ಹೃದಯಸ್ಪರ್ಶಿಯಾಗಿ ಪ್ರಾದೇಶಿಕ ಸೊಗಡಿನೊಂದಿಗೆ ಮುಷ್ತಾಕ್ ಅವರ

ಕಥೆಗಳು ಕಟ್ಟಿಕೊಟ್ಟಿವೆ ಎಂದು ತೀರ್ಪುಗಾರರು ತಿಳಿಸಿದ್ದಾರೆ.

50 ಸಾವಿರ ಪೌಂಡ್ ( ಸುಮಾರು 55 ಲಕ್ಷ ರೂ.) ಮೊತ್ತದ ಬೂಕರ್ ಪ್ರಶಸ್ತಿಗೆ ಪರಿಗಣನೆಯ ಪಟ್ಟಿಯಲ್ಲಿ ಒಟ್ಟು 13 ಕೃತಿಗಳು ಪ್ರವೇಶಪಡೆದಿವೆ.

ಅಂತಿಮ ಸುತ್ತಿಗೆ ಪ್ರವೇಶ ಪಡೆಯುವ 6 ಕೃತಿಗಳ ಪೈಕಿ ಒಂದನ್ನು ಬೂಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಎಪ್ರಿಲ್ 8ರಂದು ಬೂಕರ್ ಪುರಸ್ಕಾರ ಘೋಷಣೆಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News