ಜು.20: ಮಂಗಳೂರು-ಮುಂಬೈ 2 ರೈಲುಗಳ ಓಡಾಟದಲ್ಲಿ ವಿಳಂಬ

Update: 2023-07-17 16:04 GMT

ಸಾಂದರ್ಭಿಕ ಚಿತ್ರ

ಮಂಗಳೂರು, ಜು.17: ಸೇನಾಪುರ - ತೋಕೂರು ವಿಭಾಗದ ನಡುವೆ ಕಾಮಗಾರಿ ಹಿನ್ನೆಲೆಯಲ್ಲಿ ಜು.20ರಂದು ಮಂಗಳೂರು ಸೆಂಟ್ರಲ್‌ನಿಂದ ಮತ್ತು ಮಂಗಳೂರು ಜಂಕ್ಷನ್‌ನಿಂದ ಹೊರಡುವ ಎರಡು ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಸಂಚರಿಸಲಿದೆ.

ರೈಲು ನಂ. 10108 ಮಂಗಳೂರು ಸೆಂಟ್ರಲ್ - ಮಡಗಾಂವ್ ಜಂಕ್ಷನ್ ಮೆಮೊ ಎಕ್ಸ್ ಪ್ರೆಸ್ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಜು.20ರಂದು 1 ಗಂಟೆ ಮತ್ತು 15 ನಿಮಿಷ ತಡವಾಗಿ ಅಂದರೆ ಸಂಜೆ 4:45 ಗಂಟೆಗೆ (ನಿಗದಿತ ನಿರ್ಗಮನ 3:30 ಗಂಟೆಗೆ) ಹೊರಡಲಿದೆ.

ರೈಲು ನಂ. 12134 ಮಂಗಳೂರು ಜಂಕ್ಷನ್ - ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ರೈಲು ಜು.20ರಂದು 1 ಗಂಟೆ ತಡವಾಗಿ ಸಂಜೆ 5:35 ಗಂಟೆಗೆ (ನಿಗದಿತ ನಿರ್ಗಮನ 16:35 ಗಂಟೆಗಳು) ಹೊರಡಲಿದೆ ಎಂದು ರೈಲ್ವೆ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News