×
Ad

ಕಾಞಂಗಾಡ್ | ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಕಾರಣ ನಿಗೂಢ

Update: 2024-02-17 12:24 IST

ಸೂರ್ಯ ಪ್ರಕಾಶ್, ಗೀತಾ

ಕಾಸರಗೋಡ, ಫೆ.17: ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಞಂಗಾಡ್ ನಲ್ಲಿ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಸೂರ್ಯ ಪ್ರಕಾಶ್(55), ಅವರ ಪತ್ನಿ ಗೀತಾ(48) ಮತ್ತು ಸೂರ್ಯಪ್ರಕಾಶ್ ಅವರ ತಾಯಿ ಲೀಲಾ (90) ಮೃತಪಟ್ಟವರು. ಇವರು ಮೃತದೇಹಗಳು ಇಲ್ಲಿನ ರೈಲ್ವೆ ನಿಲ್ದಾಣ ಪರಿಸರದ ಅವಿಕ್ಕರೆಯಲ್ಲಿರುವ ವಸತಿ ಗೃಹದಲ್ಲಿ ಪತ್ತೆಯಾಗಿವೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.

ಮಾಹಿತಿ ತಿಳಿದು ಹೊಸದುರ್ಗ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಮೃತರ ಪೈಕಿ ಸೂರ್ಯ ಪ್ರಕಾಶ್ ಕಾಞಂಗಾಡ್ ನಲ್ಲಿ ವಾಚ್ ವರ್ಕ್ಸ್ ಮಳಿಗೆ ನಡೆಸುತ್ತಿದ್ದರು. ಇವರಿಗೆ ಮೂವರು ಮಕ್ಕಳಿದ್ದು, ಈ ಪೈಕಿ ಇಬ್ಬರು ಪುತ್ರಿಯರಿಗೆ ವಿವಾಹವಾಗಿದೆ. ಪುತ್ರ ಮನೆಯಲ್ಲಿದ್ದು, ಉದ್ಯೋಗ ನಿಮಿತ್ತ ಎರ್ನಾಕುಲಂ ಗೆ ತೆರಳಿದ್ದರು. ಸದ್ಯ ಮನೆಯಲ್ಲಿ ಮೂವರು ಮಾತ್ರ ಇದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News