ಮಣಿಪಾಲ: ಹಿರಿಯ ನಾಗರಿಕರ ಕಾಯ್ದೆ ಬಗ್ಗೆ ಉಪನ್ಯಾಸ

Update: 2023-07-17 15:15 GMT

ಮಣಿಪಾಲ, ಜು.17: ಕೊಂಕಣಿ ಸಂಸಾರ ಪ್ರತಿಷ್ಠಾನ ಮಣಿಪಾಲ ಇವರು ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಹಕ್ಕು ಮತ್ತು ರಕ್ಷಣೆ, ಹಿರಿಯ ನಾಗರಿಕರ ಕಾಯ್ದೆ 2007 ಮತ್ತು ಕೌಟುಂಬಿಕ ಸಮಸ್ಯಾ ಪರಿಹಾರ ಉಪನ್ಯಾಸ ಕಾರ್ಯಕ್ರಮವು ಉಡುಪಿ ಕುಂಜಿಬೆಟ್ಟು ಶಾರದಾ ವಸತಿ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಉಡುಪಿಯ ಮಾನವ ಹಕ್ಕು ಹಿತರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ. ರವೀಂದ್ರನಾಥ ಶಾನ್‌ಭಾಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿರಿಯ ನಾಗರಿಕರ ಕಾಯ್ದೆಯ ಬಗ್ಗೆ ವಿವರಗಳನ್ನು ನೀಡಿದರು.

ಪ್ರಸ್ತುತ ದಿನಗಳಲ್ಲಿ ನಗರ ಪ್ರದೇಶಗಳ ಅನೇಕ ಕುಟುಂಬಗಳಲ್ಲಿ ಹಿರಿಯ ನಾಗರಿಕರು ಹಲವಾರು ಸಂಕೀರ್ಣ ಕಾರಣಗಳಿಂದ ಗೌರವಯುವಾಗಿ ಜೀವನ ಮಾಡಲು ಬೇಕಾದ ಪರಿಸರದಿಂದ ವಂಚಿತರಾಗುತ್ತಿದ್ದಾರೆ. ಹಿರಿಯ ನಾಗರಿಕರು ಯಾವುದೇ ಕಾನೂನಿನ ಸಮಸ್ಯೆಗಳಿದ್ದಲ್ಲಿ ನೇರವಾಗಿ ಕೋರ್ಟ್ ದಾವೆ ಯನ್ನು ಹೂಡುವುದಕ್ಕೆ ಮೊದಲು ಸಹಾಯಕ ಆಯುಕ್ತರು (ರೆವೆನ್ಯೂ) ಇವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು. ಬಳಿಕ ಅವರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.

ಪ್ರಾರಂಭದಲ್ಲಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಿದ್ಯಾವಂತ ಆಚಾರ್ಯ ಸ್ವಾಗತಿಸಿದರು. ಡಾ.ಸುರೇಶ್ ಶೆಣೈ ಅತಿಥಿಗಳನ್ನು ಪರಿಚಯಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೊಂಕಣಿ ಸಂಸಾರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಡಾ.ನಾಗೇಶ್ ಕುಮಾರ್ ಜಿ ರಾವ್ ವಹಿಸಿದ್ದರು. ಕಾರ್ಯದರ್ಶಿ ಎ. ಜಗದೀಶ್ ಪೈ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News