×
Ad

ಕಾಸರಗೋಡು: ನವಕೇರಳ ಸದಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಪಿಣರಾಯಿ ವಿಜಯನ್‌ ಆಗಮನ

Update: 2023-11-18 13:58 IST

ಕಾಸರಗೋಡು: ಪೈವಳಿಕೆ ಯಲ್ಲಿ ಶನಿವಾರ ಸಂಜೆ ನವಕೇರಳ ಸದಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಚಿವ ಸಂಪುಟದ ಸಚಿವರು ಕಾಸರಗೋಡಿಗೆ ತಲುಪಿದ್ದಾರೆ.

ನಗರದ ಅತಿಥಿಗೃಹ ದಲ್ಲಿ ಪಿಣರಾಯಿ ವಿಜಯನ್ ಅವರನ್ನು ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಬರಮಾಡಿಕೊಂಡರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ಹಾಗೂ ಇನ್ನಿತರ ಅಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಬಳಿಕ ಅತಿಥಿ ಗ್ರಹದಲ್ಲಿ ನಡೆದ ನವಕೇರಳ ಪೂರ್ವ ಸಿದ್ಧತೆ ಕುರಿತು ಚರ್ಚಿಸಲು ಸಚಿವ ಸಂಪುಟ ಸಭೆ ನಡೆಯಿತು.

ಸಂಜೆ 3.30 ಕ್ಕೆ ಪೈವಳಿಕೆ ನಗರ ಹಯರ್ ಸೆಕೆಂಡರಿ ಶಾಲೆಯಲ್ಲಿ ರಾಜ್ಯ ಮಟ್ಟದ ನವ ಕೇ ರಳ ಸದಸ್ ಗೆ ಮುಖ್ಯಮಂತ್ರಿ ಚಾಲನೆ ನೀಡುವರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News