×
Ad

ಕಾಸರಗೋಡು: ರಸ್ತೆ ಅಪಘಾತ; ಬೈಕ್ ಸವಾರ ಮೃತ್ಯು

Update: 2025-12-31 11:54 IST

ಕಾಸರಗೋಡು: ಕಾರು, ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ನೀರ್ಚಾಲು ಎಂಬಲ್ಲಿ ನಡೆದಿದೆ.

ಸೀತಾಂಗೋಳಿ ಪೆಟ್ರೋಲ್ ಬಂಕ್ ನೌಕರ ಕನ್ಯಪ್ಪಾಡಿ ಬಳಿಯ ಮಾಡತ್ತಡ್ಕ ನಿವಾಸಿ ಮುಹಮ್ಮದ್ ಝೈನುದ್ದೀನ್ (29)ಮೃತಪಟ್ಟವರು.

ಬೆಳಿಗ್ಗೆ ಪೆಟ್ರೋಲ್ ಬಂಕ್ ನ ಕೆಲಸಕ್ಕೆಂದು ಬೈಕ್ ನಲ್ಲಿ ಹೋಗುವಾಗ ನೀರ್ಚಾಲು ಕೆಳಗಿನ ಪೇಟೆಯಲ್ಲಿ ಅಪಘಾತ ನಡೆದಿದೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿರಿ ಸಲಾಗಿದ್ದು, ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News