×
Ad

ಕಾಸರಗೋಡು | ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಸಿಪಿಐಎಂನ ಸಾಬು ಅಬ್ರಹಾಂ ಪ್ರಮಾಚವಚನ ಸ್ವೀಕಾರ

Update: 2025-12-27 15:33 IST

ಕಾಸರಗೋಡು : ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಸಿಪಿಐಎಂನ ಸಾಬು ಅಬ್ರಹಾಂ ಪ್ರಮಾಚವಚನ ಮಾಡಿ ಅಧಿಕಾರ ಸ್ವೀಕರಿಸಿದರು.

ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ.ಇಂಪಾ ಶೇಖರ್ ಪ್ರಮಾಣವಚನ ಭೋಧಿಸಿದರು. ಸಹಾಯಕ ಚುನಾವಣಾಧಿಕಾರಿ ಎಡಿಎಂ.ಪಿ.ಅಖಿಲ್, ಜಿ.ಪಂ. ಕಾರ್ಯದರ್ಶಿ ಎಸ್.ಬಿಜು ಮೊದಲಾದವರು ಚುನಾವಣಾ ಕರ್ತವ್ಯ ನೆರವೇರಿಸಿದರು.

ಜಿ.ಪಂ. ಕಾರ್ಯಾಲಯದಲ್ಲಿ ನಡೆದ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ 7ರ ವಿರುದ್ಧ 9 ಮತಗಳ ಅಂತರದಲ್ಲಿ ಸಾಬು ಅಬ್ರಹಾಂ ಅಧ್ಯಕ್ಷರಾಗಿ ಚುನಾಯಿತರಾದರು. ಯುಡಿಎಫ್ ನಿಂದ ಪ್ರತಿಸ್ಪರ್ಧಿಯಾಗಿ ಪುತ್ತಿಗೆಯ ಪ್ರತಿನಿಧಿ ಸೋಮಶೇಖರ ಜೆ.ಎಸ್. ಸ್ಪರ್ಧಿಸಿದ್ದರು. ಬಿಜೆಪಿಯ ಏಕೖಕ ಸದಸ್ಯ ರಾಮಪ್ಪ ಮಂಜೇಶ್ವರ ಚುನಾವಣೆ ಬಹಿಷ್ಕರಿಸಿ ತಟಸ್ಥರಾದರು. ನಿಶ್ಚಿತ ಸಮಯಕ್ಕೆ ತಲುಪಲಾಗದೇ ಯುಡಿಎಫ್ ನ ಓರ್ವ ಸದಸ್ಯರಿಗೆ ಮತದಾನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.

ಅಧ್ಯಕ್ಷರಾಗಿ ಚುನಾಯಿತರಾದ ಸಿಪಿಎಂನ ಸಾಬು ಅಬ್ರಹಾಂ ಕುತ್ತಿಕೋಲ್ ಡಿವಿಜನ್ ಪ್ರತಿನಿಧಿಯಾಗಿದ್ದಾರೆ. 18 ಸದಸ್ಯ ಬಲದಲ್ಲಿ ಎಲ್ ಡಿ ಎಫ್ 9, ಯು ಡಿ ಎಫ್ 8 ಮತ್ತು ಬಿಜೆಪಿ 1 ಸ್ಥಾನ ಪಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News