ಕಾಸರಗೋಡು | ಕೃಪಾ ಪಾರ್ವತಿ ಕುಟುಂಬದಿಂದ ಆಟಿಡೊಂಜಿ ದಿನ ಕಾರ್ಯಕ್ರಮ
Update: 2025-08-16 22:35 IST
ಕಾಸರಗೋಡು : ಕೃಪಾ ಪಾರ್ವತಿ ಕುಟುಂಬದಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಮಾನ್ಯ ಬೇಳ ಗ್ರಾಮದ ಕೃಪಾ ಪಾರ್ವತಿ ನಿಲಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಿವಪ್ಪ ಎಂ ಅವರು ಉದ್ಘಾಟಿಸಿದರು. ಕುಟುಂಬದ ಹಿರಿಯರಾದ ಶಿವಪ್ಪರವರಿಗೆ ಶಾಲು ಹೊದಿಸಿ, ಮಾಲೆ ಹಾಕಿ ಪೇಟ ತೊಡಿಸಿ ಸನ್ಮಾನಿಸಲಾಯಿತು. ಕುಟುಂಬದ ಸದಸ್ಯರು ತಮ್ಮ ಮನೆಗಳಿಂದ ತಯಾರಿಸಿ ತಂದ ಸುಮಾರು 25 ಬಗೆಯ ತಿಂಡಿ ತಿನಿಸುಗಳು ಎಲ್ಲರನ್ನೂ ಮನಸೂರೆಗೊಳಿಸಿತ್ತು.
ಭೋಜನದ ನಂತರ ಆಟೋಟ ಸ್ಫರ್ಧೆ ನಡೆಯಿತು. ಕ್ರೀಡೆಯಲ್ಲಿ ವಿಜೇತರಿಗೆ ಸುಬ್ರಹ್ಮಣ್ಯ, ಹರಿಕೃಷ್ಣ, ಶಿವಪ್ಪ ಎಂ. ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಯೋಗಿಶ್ ಸ್ವಾಗತಿಸಿ, ರಾಜೇಶ್ವರಿ ಎಂ. ಧನ್ಯವಾದ ಸಲ್ಲಿಸಿದರು. ಮಮತ ಎಂ. ಕಾರ್ಯಕ್ರಮ ನಿರೂಪಿಸಿದರು.