ಕಾಸರಗೋಡು | ಚಲಿಸುತ್ತಿದ್ದ ಆಟೊ ರಿಕ್ಷಾದ ಮೇಲೆ ಬಿದ್ದ ಭಾರೀ ಗಾತ್ರದ ಮರ
Update: 2025-07-16 12:51 IST
ಕಾಸರಗೋಡು: ಚಲಿಸುತ್ತಿದ್ದ ಅಟೋ ರಿಕ್ಷಾದ ಮೇಲೆ ಭಾರೀ ಗಾತ್ರದ ಮರ ಬಿದ್ದ ಘಟನೆ ಗುರುವಾರ ಬೆಳಗ್ಗೆ ಮುಳ್ಳೇರಿಯ - ಆದೂರು ರಸ್ತೆಯ ಅಲಂತಡ್ಕ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಓರ್ವ ಗಾಯಗೊಂಡಿದ್ದರೆ, ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ಆದೂರು ಸಿ.ಎ. ನಗರದ ಅಬ್ದುಲ್ಲ ಕುಂಞಿ ಗಾಯಗೊಂಡವರು. ಅವರನ್ನು ಮುಳ್ಳೇರಿಯಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮರವನ್ನು ಕಡಿದು ತೆರವುಗೊಳಿಸಿದ್ದಾರೆ.