ಕಾಸರಗೋಡು: ರಸ್ತೆ ಬದಿ ನಿಲ್ಲಿಸಿದ್ದ ಟೋರಸ್‌ಗೆ ಲಾರಿ ಢಿಕ್ಕಿ; ಚಾಲಕನಿಗೆ ಗಾಯ
Update: 2025-05-22 12:36 IST
ಕಾಸರಗೋಡು: ರಸ್ತೆ ಬದಿ ನಿಲ್ಲಿಸಿದ್ದ ಟೋರಸ್ ಲಾರಿಯ ಹಿಂಬದಿಗೆ ಇನ್ನೊಂದು ಲಾರಿ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಎಂಬಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಜಲ್ಲಿ ತುಂಬಿದ್ದ ಲಾರಿ ರಸ್ತೆ ಬದಿ ನಿಲುಗಡೆ ಗೊಳಿಸಲಾಗಿತ್ತು. ಆದರೆ ಇದೇ ಕಂಪೆನಿಯ ಇನ್ನೊಂದು ಲಾರಿ ಚಾಲಕನ ನಿಯಂತ್ರಣ ತಪ್ಪಿ ಹಿಂದಿನಿಂದ ಢಿಕ್ಕಿ ಹೊಡೆದಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ, ನಜ್ಜುಗುಜ್ಜಾ ದ ಲಾರಿಯ ಕ್ಯಾಬಿನ್ ನೊಳಗೆ ಎರಡು ಗಂಟೆಗೂ ಅಧಿಕ ಸಮಯ ಸಿಲುಕಿಕೊಂಡಿದ್ದ ಚಾಲಕನನ್ನು ರಕ್ಷಿಸಿ ಹೊರತೆಗೆದರು.