×
Ad

ಕಾಸರಗೋಡು : ರಸ್ತೆ ಅಪಘಾತಕ್ಕೆ ದ್ವಿಚಕ್ರ ವಾಹನ ಸವಾರ ಬಲಿ

Update: 2023-11-06 19:10 IST

ಕಾಸರಗೋಡು : ದ್ವಿಚಕ್ರ ವಾಹನಗಳು ಪರಸ್ಪರ ಢಿಕ್ಕಿ ಹೊಡೆದು ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಸಿಪಿಎಂ ಮುಖಂಡರೊಬ್ಬರ ಮೇಲೆ ಬಸ್‌ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸೋಮವಾರ ಮಧ್ಯಾಹ್ನ ಬೆಳ್ಳೂರು ಪಳ್ಳಪ್ಪಾಡಿಯಲ್ಲಿ ನಡೆದಿದೆ.

ಬೆಳ್ಳೂರು ಬಲವಂತಡ್ಕದ ತಿಮ್ಮಪ್ಪ (63) ಮೃತರು. ಅವರು ಸಿಪಿಎಂ ಬೆಳ್ಳೂರು ಸ್ಥಳೀಯ ಸಮಿತಿ ಸದಸ್ಯರಾಗಿದ್ದರು.

ಬಲವಂತಡ್ಕದಿಂದ ಬೆಳ್ಳೂರುನಲ್ಲಿರುವ ಸಹೋದರಿಯ ಮನೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಇನ್ನೊಂದು ಸ್ಕೂಟರ್ ಢಿಕ್ಕಿ ಹೊಡೆದಿದ್ದು, ಈ ವೇಳೆ ರಸ್ತೆಗೆಸೆಲ್ಪಟ್ಟ ತಿಮ್ಮಪ್ಪರವರ ಮೇಲೆ ಕಾಸರಗೋಡಿನಿಂದ ತೆರಳುತ್ತಿದ್ದ ಖಾಸಗಿ ಬಸ್  ಹರಿದು ಈ ದುರ್ಘಟನೆ ನಡೆದಿದೆ.‌

ಇನ್ನೊಂದು ಸ್ಕೂಟರ್ ನಲ್ಲಿದ್ದ ಕಿನ್ನಿಂಗಾರ್ ನ ಗಿರೀಶ್ (32) ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News