×
Ad

ಕಾಸರಗೋಡು: ಬೈಕ್ ಸಹಿತ ನದಿಪಾಲಾಗಿದ್ದ ಬೆಳಗಾವಿ ಮೂಲದ ಯುವಕನ ಮೃತದೇಹ ಪತ್ತೆ

Update: 2025-07-21 12:15 IST

ದುರ್ಗಪ್ಪ 

ಕಾಸರಗೋಡು: ಪಾಣತ್ತೂರು ಮಂಜತ್ತಡ್ಕ ನದಿಯಲ್ಲಿ ಬೈಕ್ ಸಹಿತ ನೀರುಪಾಲಾಗಿದ್ದ ಬೆಳಗಾವಿ ಮೂಲದ ಕಾರ್ಮಿಕನ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ. ಇಂದು ಬೆಳಿಗ್ಗೆ ಶೋಧ ನಡೆಸಿದಾಗ ಘಟನೆ ನಡೆದ ಸ್ಥಳದಿಂದ ಅಲ್ಪ ದೂರ ಮೃತದೇಹ ಪತ್ತೆಯಾಗಿದೆ. ಭಾರೀ ಮಳೆಯಿಂದ ನೀರಿನ ಸೆಳೆತ ಹೆಚ್ಚಿರುವುದರಿಂದ ಎರಡು ದಿನಗಳಿಂದ ಶೋಧಕ್ಕೆ ಅಡ್ಡಿಯಾಗಿತ್ತು.

ಬೆಳಗಾವಿಯ ದುರ್ಗಪ್ಪ (18) ಮೃತಪಟ್ಟ ಯುವಕ. ಈತ ರಾಜಪುರ ತೋಟಗಾರಿಕಾ ನಿಗಮದ ಅನಾನಸು ಕೃಷಿ ಕೇಂದ್ರದಲ್ಲಿ ಜೆಸಿಬಿ ಚಾಲಕನ ಸಹಾಯಕ ನಾಗಿ ಕೆಲಸ ನಿರ್ವಹಿಸುತ್ತಿದ್ದ.

ಜುಲೈ 17 ರಂದು ಮಧ್ಯಾಹ್ನ ಆಹಾರ ತರಲು ಬೈಕ್ ನಲ್ಲಿ ತೆರಳಿದ್ದ ಈತ ನಾಪತ್ತೆಯಾಗಿದ್ದ. ಬೈಕ್ ಸಹಿತ ನಾಪತ್ತೆಯಾದುದರಿಂದ ನದಿ ಪಾಲಾಗಿರಬಹುದು ಎಂದು ಶಂಕಿಸಲಾಗಿತ್ತು.

ಈ ಬಗ್ಗೆ ಮಾಲಕ ರಾಜಪುರ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸ್ , ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ನಾಗರಿಕರು ಶೋಧ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News