×
Ad

ಕಾಸರಗೋಡು: ಸೈಕಲ್ ಚೈನ್‌ಗೆ ಕಾಲು ಸಿಲುಕಿದ ಒದ್ದಾಡಿದ ಬಾಲಕ; ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣೆ

Update: 2025-05-20 10:00 IST

ಕಾಸರಗೋಡು: ಸೈಕಲ್ ಚೈನ್ ಗೆ ಕಾಲು ಸಿಲುಕಿ ನರಳಾಡಿದ ಆರು ವರ್ಷದ ಬಾಲಕನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ತಳಂಗರೆಯಲ್ಲಿ ಸೋಮವಾರ ನಡೆದಿದೆ.

ಸೋಮವಾರ ಸಂಜೆ ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕನ ಕಾಲಿಗೆ ಚೈನ್ ಸಿಲುಕಿಕೊಂಡಿತ್ತು. ಬಾಲಕನ ಬೊಬ್ಬೆ ಕೇಳಿ ಧಾವಿಸಿದ ಮನೆಯವರು ಹಾಗೂ ಸ್ಥಳೀಯರು ಎಷ್ಟೇ ತೆಗೆಯಲೆತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಕಾಸರಗೋಡಿನ ಅಗ್ನಿ ಶಾಮಕ ದಳದ ಸಿಬಂದಿಗಳಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಟ್ಟರ್ ಬಳಸಿ ಚೈನ್ ತುಂಡರಿಸಿ ಬಾಲಕನನ್ನು ರಕ್ಷಿಸಿದ್ದಾರೆ.

ಅಗ್ನಿಶಾಮಕ ದಳದ ಅಧಿಕಾರಿ ವಿ. ಎನ್ ಗೋಪಾಲನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಬಾಲಕನ ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News