×
Ad

ಕಾಸರಗೋಡು: ಐಸಿಎಆರ್-ಸಿಪಿಸಿಆರ್ ನಲ್ಲಿ 'ಸ್ವಚ್ಛತಾ ದಿವಸ್' ಕಾರ್ಯಕ್ರಮ

Update: 2023-10-04 10:56 IST

ಕಾಸರಗೋಡು: ಗಾಂಧಿ ಜಯಂತಿ ಆಚರಣೆಯ ಅಂಗವಾಗಿ, 2023 ರ ಅಕ್ಟೋಬರ್ 2 ರಂದು ಕಾಸರಗೋಡಿನ ಐಸಿಎಆರ್-ಸಿಪಿಸಿಆರ್ಐ (ICAR-CPCRI) ನಲ್ಲಿ 'ಸ್ವಚ್ಛತಾ ದಿವಸ್' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಐಸಿಎಆರ್-ಸಿಪಿಸಿಆರ್ ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಆಗಸ್ಟಿನ್ ಜೆರಾರ್ಡ್ (ಸಂಸ್ಥೆಯ ಸ್ವಾಚ್ ಭಾರತ್ ಮಿಷನ್ ಸಮಿತಿಯ ಅಧ್ಯಕ್ಷರು) ಸ್ವಾಗತಿಸಿದರು. ಅವರ ನೇತೃತ್ವದಲ್ಲಿ ICAR-CPCRI ಯ ಎಲ್ಲಾ ಸಿಬ್ಬಂದಿಗಳಿಂದ 'ಸ್ವಚ್ಛತಾ ಪ್ರತಿಜ್ಞೆ' ತೆಗೆದುಕೊಳ್ಳಲಾಯಿತು.

ಹಿರಿಯ ವಿಜ್ಞಾನಿ ಡಾ.ಕೆ.ಸಂಸುದೀನ್ ಅವರು ‘ಸ್ವಚ್ಛ ಭಾರತ ಅಭಿಯಾನ’ದ ವಿಚಾರ ಮತ್ತು ಮಹತ್ವ ಮತ್ತು ‘ಸ್ವಚ್ಛತಾ ಹಿ ಸೇವೆ’ ವಿಷಯದ ಕುರಿತು ವಿವರವಾದ ಭಾಷಣ ಮಾಡಿದರು.

ಅನಂತರ, ಸಿಪಿಸಿಆರ್ಐ ಆವರಣದಲ್ಲಿ 'ಸ್ವಚ್ಛತಾ ಅಭಿಯಾನ' ನಡೆಸಲಾಯಿತು. ಸಂಸ್ಥೆಯ ವಿಶಾಲವಾದ ಆವರಣವನ್ನು ಸ್ವಚ್ಛಗೊಳಿಸುವ, ನೈರ್ಮಲ್ಯ ಅಭಿಯಾನದಲ್ಲಿ ಎಲ್ಲಾ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News