×
Ad

ಕಾಸರಗೋಡು: ಬೆಂಕಿ ಆಕಸ್ಮಿಕ; ಹೆದ್ದಾರಿ ಮಧ್ಯೆ ಹೊತ್ತಿ ಉರಿದ ಕಾರು

Update: 2025-05-23 12:22 IST

ಕಾಸರಗೋಡು: ಚಲಿಸುತ್ತಿದ್ದ ಕಾರು ಅಗ್ನಿಗಾಹುತಿಯಾದ ಘಟನೆ ಶುಕ್ರವಾರ ಬೆಳಿಗ್ಗೆ  ಚೆರ್ಕಳ ಸಮೀಪದ ಬೇವಿಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಕಾರಲ್ಲಿದ್ದ ಐವರು ಅಪಾಯದಿಂದ ಪಾರಾಗಿದ್ದಾರೆ. ಮುಂಬೈಯಿಂದ ಕಣ್ಣೂರಿನ ಕಣ್ಣಾಪುರಕ್ಕೆ ತೆರಳುತ್ತಿದ್ದ ಕಾರು ಬೇವಿಂಜೆಗೆ ತಲುಪಿದಾಗ ಬೋನೆಟ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಎಲ್ಲರೂ ಹೊರಬಂದರು. ಕ್ಷಣಾರ್ಧದಲ್ಲಿ ಕಾರು ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟುಕರಕಲಾಗಿದೆ. ಕಾರಿನೊಳಗಿದ್ದ ಹಣ, ನಾಲ್ಕು ಪವನ್ ಚಿನ್ನಾಭರಣ, ಎರಡು ಮೊಬೈಲ್ ಫೋನ್, ಕ್ಯಾಮರಾ ಮೊದಲಾದವು ಹೊತ್ತಿ ಉರಿದಿವೆ ಎಂದು ತಿಳಿದು ಬಂದಿದೆ. 

ಮುಂಬೈ ನಲ್ಲಿರುವ ಇಕ್ಬಾಲ್ ಅಹ್ಮದ್ ಎಂಬವರು ಪತ್ನಿ , ಮಕ್ಕಳ ಸಹಿತ ಕಣ್ಣಾಪುರದಲ್ಲಿರುವ ಪತ್ನಿಯ ಸಹೋದರನ ಮನೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಒಂದೂವರೆ ತಿಂಗಳ ಹಿಂದೆಯಷ್ಟೆ ಸಿ. ಎನ್.ಜಿ ಕಾರು ಖರೀದಿಸಿದ್ದರು ಎನ್ನಲಾಗಿದೆ.

ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News