×
Ad

ಕಾಸರಗೋಡು: ಎಂಡಿಎಂಎ ಮಾದಕ ವಸ್ತು ಸಹಿತ ನಾಲ್ವರು ಆರೋಪಿಗಳ ಬಂಧನ

Update: 2024-09-27 19:56 IST

ಕಾಸರಗೋಡು: ಎಂಡಿಎಂಎ ಮಾದಕ ವಸ್ತು ಸಹಿತ ನಾಲ್ವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇವರ ಬಳಿಯಿಂದ 29.4 ಗ್ರಾಂ ಎಂಡಿಎಂಎ ಮಾದಕ ವಸ್ತು ವನ್ನು ವಶಪಡಿಸಿ ಕೊಳ್ಳಲಾಗಿದೆ.

ಪೈವಳಿಕೆ ಬಾಯಿ ಕಟ್ಟೆಯಿಂದ ನಾಲ್ವರನ್ನು ಬಂಧಿಸಿದ್ದು, ಕಾರನ್ನು ವಶಪಡಿಸಿ ಕೊಳ್ಳಲಾಗಿದೆ. ಬಂಧಿತರನ್ನು ಬಳ್ಳೂ ರಿನ ಅಶ್ರಫ್ (21), ಕೊಡಿಬೈಲ್ ನ ನವಾಝ್ ( 30), ಬೆಳ್ಳೂರಿನ ಅಹಮ್ಮದ್ ಶಮ್ಮಾಸ್ (20) ಮತ್ತು ಬಂಟ್ವಾಳದ ಇಸಾಕ್ (20) ಎಂದು ಗುರುತಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಮೇಲ್ನೋಟದಲ್ಲಿ ಡಿ ವೈ ಎಸ್ಪಿ ಪಿ . ಸುನಿಲ್ ಕುಮಾರ್ ಹಾಗೂ ಮಂಜೇಶ್ವರ ಠಾಣಾ ಸಬ್ ಇನ್ಸ್ ಪೆಕ್ಟರ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಕೆಲ ದಿನಗಳ ಹಿಂದೆ ಉಪ್ಪಳ ದಲ್ಲಿ ಮನೆ ಯೊಂದು ಕೇಂದ್ರೀಕರಿಸಿ ನಡೆಯುತ್ತಿದ್ದ  ಡ್ರಗ್ಸ್ ಜಾಲ ವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News