×
Ad

ಕಾಸರಗೋಡು : ಅನಿಲ ಸಾಗಾಟದ ಟ್ಯಾಂಕರ್ ಪಲ್ಟಿ

Update: 2024-09-25 18:44 IST

ಕಾಸರಗೋಡು: ಅನಿಲ ಸಾಗಾಟದ ಟ್ಯಾಂಕರ್ ಲಾರಿ ರಸ್ತೆಗೆ ಮಗುಚಿ ಬಿದ್ದ ಘಟನೆ ಎಡನೀರು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಮಂಗಳೂರಿನಿಂದ ಕೊಚ್ಚಿಗೆ ತೆರಳುತ್ತಿದ್ದ ಟ್ಯಾಂಕರ್ ಎಡನೀರು ಕೋರಿಕ್ಕಾರ್ ಮೂಲೆ ಎಂಬಲ್ಲಿ ಚಾಲಕ ನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಆದರೆ ಅನಿಲ ಸೋರಿಕೆ ಯಾಗಿಲ್ಲ. ಅನಿಲ ಸೋರಿಕೆ ಬಗ್ಗೆ ಆತಂಕ ಇದ್ದರೂ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸೋರಿಕೆ ಇಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ. ಕಾಸರಗೋಡಿನಿಂದ ಚೆರ್ಕಳ- ಬದಿಯಡ್ಕ ರಸ್ತೆಯಲ್ಲಿ ವಾಹನ ಸಂಚಾರ ತಾತ್ಕಾಲಿಕ ವಾಗಿ ಸ್ಥಗಿತ ಗೊಳಿಸಲಾಗಿದೆ.

ಕಾಸರಗೋಡು ಅಗ್ನಿ ಶಾಮಕ ದಳದ ಸಿಬ್ಬಂದಿ, ವಿದ್ಯಾನಗರ ಠಾಣಾ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮಂಗಳೂರಿನಿಂದ ಕಂಪೆನಿ ಅಧಿಕಾರಿಗಳು ಬಂದ ಬಳಿಕ ಟ್ಯಾಂಕರ್ ನ್ನು ತೆರವು ಗೊಳಿಸುವ ಅಥವಾ ಅನಿಲವನ್ನು ಇನ್ನೊಂದು ಟ್ಯಾಂಕರ್ ಗೆ ವರ್ಗಾಯಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಟ್ಯಾಂಕರ್ ಸೇರಿದಂತೆ ಬಹುತೇಕ ವಾಹನಗಳು ಕುಂಬಳೆ - ಸೀತಾಂಗೋಳಿ - ಚೆರ್ಕ ಳ ದಾರಿಯಾಗಿ ಸಂಚರಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News