ಕಾಸರಗೋಡು: ಅಕ್ರಮ ಸ್ಪಿರಿಟ್ ಸಾಗಾಟ; ಮೂವರ ಬಂಧನ
Update: 2025-07-20 09:00 IST
ಕಾಸರಗೋಡು: ಮಿನಿ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1645 ಲೀಟರ್ ಸ್ಪಿರಿಟನ್ನು ಕಾಸರಗೋಡು ನಗರ ಠಾಣಾ ಪೊಲೀಸರು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ .ʼʼ
ನೆಲ್ಲಿಕುಂಜೆಯ ಪ್ರಣವ್ ಶೆಣೈ , ಅಡ್ಕತ್ತಬೈಲ್ ನ ಅನೂಶ್ ಹಾಗೂ ಕೊಟ್ಟಾಯಂನ ಥಾಮಸ್ ಬಂಧಿತ ಆರೋಪಿಗಳು. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ರಾಷ್ಟ್ರೀಯ ಹೆದ್ದಾರಿಯ ಅಡ್ಕತ್ತಬೈಲ್ ನಲ್ಲಿ ವಾಹನ ತಪಾಸಣೆ ನಡೆಸಿ ಅಕ್ರಮ ಸಾಗಾಟ ಪತ್ತೆ ಹಚ್ಚಿದ್ದಾರೆ.
ಮಂಗಳೂರಿನಿಂದ ಎರ್ನಾಕುಲಂ ಗೆ ಸ್ಪಿರಿಟನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ