×
Ad

ಕಾಸರಗೋಡು: ಮುಹಿಮ್ಮಾತ್ ಮೀಲಾದ್ ಘೋಷಣಾ ರ್‍ಯಾಲಿ

Update: 2023-09-15 22:47 IST

ಕಾಸರಗೋಡು: ಮುಹಿಮ್ಮಾತ್ ಮದ್ಹುರ್ರಸೂಲ್ ಫೌಂಡೇಶನ್ ಇದರ ಅದೀನದಲ್ಲಿ ಒಂದು ತಿಂಗಳು ನಡೆಯುವ ಮೀಲಾದ್ ಕಾರ್ಯಕ್ರಮಕ್ಕೆ ಕಾಸರಗೋಡಿನಲ್ಲಿ ಘೋಷಣಾ ರ್‍ಯಾಲಿ ನಡೆಯಿತು.

ಕಾಸರಗೋಡು ಝೋನ್ ಕೇರಳ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಸಹಯೋಗದೊಂದಿಗೆ ನಡೆದ ರ್‍ಯಾಲಿ ಜನಸಾಗರದಿಂದ, ದಫ್, ಸ್ಕೌಟ್ ಮುಂತಾದ ಸಂಘಗಳ ಆಕರ್ಷಣೀಯ ಪೆರೇಡ್ಗಳಿಂದ ಆಕರ್ಷಣೀಯವಾಯಿತು.

ತಿರುನೆಬಿ (ಸ) ರ ಸ್ನೇಹ ಲೋಕ ಎಂಬ ಸಂದೇಶದೊಂದಿಗೆ ಕೇರಳ ಮುಸ್ಲಿಂ ಜಮಾಅತ್ ಕರೆ ನೀಡಿದ ಮೀಲಾದ್ ಕಾರ್ಯಕ್ರಮದೊಂದಿಗೆ ಜಂಟಿಯಾಗಿ ನೆಲ್ಲಿಕುನ್ನಿನಿಂದ ತಳಂಗರೆ ತನಕ ಮುಹಿಮ್ಮಾತ್ ಘೋಷಣಾ ರ್‍ಯಾಲಿ ಜರುಗಿತು.

ನೆಲ್ಲಿಕುನ್ನ್ ಮಖಾಂ ಝಿಯಾರತಿಗೆ ಸಯ್ಯಿದ್ ಹಸನ್ ಅಹ್ದಲ್ ತಂಙಳ್ ನೇತೃತ್ವ ವಹಿಸಿದರು. ಮಖಾಂ ಪರಿಸರದಿಂದ ಆರಂಭಗೊಂಡ ರ್‍ಯಾಲಿಯನ್ನು ಕಾಸರಗೋಡು ಎಂ ಎಲ್ ಎ. ಎನ್ ಎ ನೆಲ್ಲಿಕುನ್ನ್ ಉದ್ಘಾಟಿಸಿದರು.

ಸುನ್ನಿ ಪ್ರಾಸ್ತಾವಿಕ ನೇತಾರರು ಹಾಗು ಮುಹಿಮ್ಮಾತ್ ಸಾರಥಿಗಳಾದ ಸಯ್ಯಿದ್ ಹಸನ್ ಅಹ್ದಲ್ ತಂಙಳ್, ಬಿ.ಎಸ್. ಅಬ್ದುಲ್ಲ ಕುಂಞಿ ಫೈಝಿ, ಹಾಜಿ ಅಮೀರಲಿ ಚೂರಿ, ಕಟ್ಟಿಪ್ಪಾರ ಅಬ್ದುಲ್ ಕಾದಿರ್ ಸಖಾಫಿ, ಸಯ್ಯಿದ್ ಮುನೀರ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಸಯ್ಯಿದ್ ಇಬ್ರಾಹಿಂ ಅಲ್ ಹಾದಿ, ಸಯ್ಯಿದ್ ಅಬ್ದುಲ್ ಕರೀಮ್ ಅಲ್ ಹಾದಿ, ಸಯ್ಯಿದ್ ಅಲವಿ ತಂಙಳ್ ಚೆಟ್ಟುಂಕುಝಿ, ವೈ.ಎಂ ಅಬ್ದುಲ್ ರಹ್ಮಾನ್ ಅಹ್ಸನಿ, ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್, ಸುಲೈಮಾನ್ ಕರಿವೆಳ್ಳೂರು, ಪಿ.ಬಿ.ಬಶೀರ್ ಪುಲಿಕೂರು, ಮೂಸಾ ಸಖಾಫಿ ಕಳತ್ತೂರು, ಅಬೂಬಕ್ಕರ್ ಕಾಮಿಲ್ ಸಖಾಫಿ ಮುಂತಾದ ನೇತಾರರು ರ್‍ಯಾಲಿಗೆ ನೇತೃತ್ವ ನೀಡಿದರು. ಪಲ್ಲಂ ಟ್ರಾಫಿಕ್ ಜಂಕ್ಷನ್ ಮೂಲಕ ತಾಯಲಂಗಡಿ ಮೂಲಕ ಸಾಗಿ ತಳಂಗರೆ ಮಾಲಿಕುದೀನಾರ್ ಮಖಾಂ ಆವರಣದಲ್ಲಿ ಸಮಾಪನಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News