×
Ad

ಕಾಸರಗೋಡು: ಪೊಲೀಸ್ ಸಿಬ್ಬಂದಿಯ ಕೊಲೆ; ಆರೋಪಿ ಪತಿ ಪರಾರಿ

Update: 2024-11-21 22:50 IST

 ದಿವ್ಯಶ್ರೀ

ಕಾಸರಗೋಡು: ಪೊಲೀಸ್ ಸಿಬ್ಬಂದಿಯನ್ನು ಅವರ ಪತಿಯೇ ಇರಿದು ಕೊಲೆಗೈದಿದ್ದಾನೆ ಎನ್ನಲಾದ ಘಟನೆ ಕಣ್ಣೂರಿನ ಕರಿವೆಳ್ಳೂರಿನಲ್ಲಿ ಗುರುವಾರ ಸಂಜೆಯ ವೇಳೆ ಘಟನೆ ನಡೆದಿದೆ.

ಕಾಸರಗೋಡು ಚಂದೇರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ದಿವ್ಯಶ್ರೀ ಕೊಲೆಯಾದವರು. ಅವರ ಪತಿ ರಾಜೇಶ್ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರ ಗಾಯಗೊಂಡ ದಿವ್ಯಶ್ರೀ ಅವರನ್ನು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ದಿವ್ಯಶ್ರೀ ಹಾಗೂ ರಾಜೇಶ್ ನಡುವೆ ದಾಂಪತ್ಯ ಸಮಸ್ಯೆ ಉಂಟಾಗಿತ್ತು .ಇದರಿಂದ ಕೆಲ ದಿನಗಳಿಂದ ಇಬ್ಬರೂ ಬೇರ್ಪಟ್ಟು ವಾಸವಾಗಿದ್ದರು ಎನ್ನಲಾಗಿದೆ. ಸಂಜೆಯ ವೇಳೆ ತಲವಾರು ಹಿಡಿದುಕೊಂಡು ಬಂದ ರಾಜೇಶ್ ದಿವ್ಯಶ್ರೀ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಮುಖ ಹಾಗೂ ಕುತ್ತಿಗೆಗೆ ಗಂಭೀರ ಗಾಯವಾಗಿತ್ತು. ಈ ವೇಳೆ ತಡೆಯಲು ಬಂದ ತಂದೆಗೂ ಗಾಯ ಗಳಾಗಿವೆ. ಬೊಬ್ಬೆ ಕೇಳಿ ಪರಿಸರ ವಾಸಿಗಳು ಬಂದಿದ್ದು, ಈ ವೇಳೆ ರಾಜೇಶ್ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News