ಕಾಸರಗೋಡು| ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ಸೆರೆ
Update: 2025-07-22 23:29 IST
ಕಾಸರಗೋಡು: ರೈಲು ಪ್ರಯಾಣಿಕೆಯಾದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ನೈವಲಿಯ ವೆಂಕಟೇಶನ್ (35) ಬಂಧಿತ ಆರೋಪಿ. ರವಿವಾರದಂದು ಘಟನೆ ನಡೆದಿದ್ದು, ಮಂಗಳೂರು ಕಡೆಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಕೆಗೆ ಈತ ಕಿರುಕುಳ ನೀಡಿದ್ದು, ಇತರ ಪ್ರಯಾಣಿಕರು ಈತನನ್ನು ಹಿಡಿದು ರೈಲು ಕಾಸರಗೋಡಿಗೆ ತಲಪಿದಾಗ ಪೊಲೀಸರಿಗೆ ಒಪ್ಪಿಸಿದರು. ವಿದ್ಯಾರ್ಥಿನಿ ನೀಡಿದ ದೂರಿನಂತೆ ಈತನನ್ನು ಬಂಧಿಸಲಾಗಿದೆ.