×
Ad

ಕಾಸರಗೋಡು : ಆವರಣ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಮೃತ್ಯು

Update: 2023-11-21 17:50 IST

ಕಾಸರಗೋಡು : ಪೈಪ್ ಲೈನ್ ಅಳವಡಿಕೆಗೆ ಹೊಂಡ ತೋಡುತ್ತಿದ್ದಾಗ ಆವರಣ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ.

ಕರ್ನಾಟಕ ಮೂಲದ ಲಕ್ಷ್ಮಪ್ಪ (42) ಮತ್ತು ಬಿ.ಎಂ ಬಸಯ್ಯ (40) ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಅವಶೇಷಗಳಡಿ ಸಿಲುಕಿದ್ದ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೈಪ್ ಲೈನ್ ಅಳವಡಿಕೆಗೆ ಹೊಂಡ ತೋಡುತ್ತಿದ್ದಾಗ ಬದಿಯಲ್ಲಿದ್ದ ಆವರಣ ಗೋಡೆ ಕುಸಿದು ಬಿದ್ದಿದ್ದು, ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರನ್ನು ಪರಿಸರವಾಸಿಗಳು ಹಾಗೂ ಪೊಲೀಸರು ಹೊರತೆಗೆದರು. ಆದರೆ ಇಬ್ಬರು ಮೃತಪಟ್ಟಿದ್ದರು. ಹೆಚ್ಚಿನ ಮಾಹಿತಿ ಲಭಿಸಿಲ್ಲ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News