ಕಾಸರಗೋಡು | ಯುವಕ ನಾಪತ್ತೆ: ನದಿ ದಾಟುತ್ತಿದ್ದ ವೇಳೆ ಬೈಕ್ ಸಹಿತ ನದಿಪಾಲಾಗಿರುವ ಶಂಕೆ
Update: 2025-07-20 13:00 IST
ಕಾಸರಗೋಡು: ಪಾನತ್ತೂರು ಮಂಜಡ್ಕ ಎಂಬಲ್ಲಿ ಯುವಕನೋರ್ವ ನಾಪತ್ತೆಯಾಗಿದ್ದು, ನದಿ ದಾಟುತ್ತಿದ್ದ ವೇಳೆ ಬೈಕ್ ಸಹಿತ ನದಿಪಾಲಾಗಿರುವ ಶಂಕೆ ವ್ಯಕ್ತವಾಗಿದೆ.
ಪಾನತ್ತೂರಿನ ತೋಟಗಾರಿಕಾ ನಿಗಮದ ಕಾರ್ಮಿಕರಾಗಿರುವ ಬೆಳಗಾವಿ ಮೂಲದ ದುರ್ಗಪ್ಪ(18) ನಾಪತ್ತೆಯಾದವರು.
ದುರ್ಗಪ್ಪ ಬುಧವಾರ ಮಧ್ಯಾಹ್ನ ಆಹಾರ ಸೇವಿಸಲೆಂದು ಬೈಕಿನಲ್ಲಿ ತೆರಳಿದವರು ಬಳಿಕ ನಾಪತ್ತೆಯಾಗಿದ್ದರೆನ್ನಲಾಗಿದೆ. ಬೈಕಿನಲ್ಲಿ ನದಿ ದಾಟುತ್ತಿದ್ದಾಗ ನೀರುಪಾಲಾಗಿರಬಹುದು ಎಂದು ಶಂಕಿಸಲಾಗಿದೆ.
ಅಗ್ನಿ ಶಾಮಕ ದಳದ ಸಿಬ್ಬಂದಿ, ಸ್ಥಳೀಯರು ಶೋಧ ನಡೆಸುತ್ತಿದ್ದಾರೆ.