×
Ad

ಕಾಸರಗೋಡು ಜಿಲ್ಲಾ ನೋಂದಾಣಿಧಿಕಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2023-07-24 16:14 IST

ಕಾಸರಗೋಡು: ಜಿಲ್ಲಾ ನೋಂದಾಣಿಧಿಕಾರಿ ವಾಸಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಮೂಲತಃ ಮಲಪ್ಪುರಂ ನಿವಾಸಿ ಟಿ. ಇ ಮುಹಮ್ಮದ್ ಅಶ್ರಫ್ (55) ಎಂದು ಗುರುತಿಸಲಾಗಿದೆ.

ಕಾಸರಗೋಡು ಜಿಲ್ಲಾ ನೋಂದಣಿ ಅಧಿಕಾರಿಯಾಗಿದ್ದ ಇವರು ನಗರ ಹೊರವಲಯದ ಹೊಟೇಲೊಂದರಲ್ಲಿ ಜುಲೈ19 ರಂದು ರೂಂ ಪಡೆದು ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ.

ಬೆಳಿಗ್ಗೆ ಅಶ್ರಫ್ ರವರು ರೂಂ ನಿಂದ ಹೊರಬರದೆ, ಮೊಬೈಲ್ ಕರೆಯನ್ನೂ ಸ್ವೀಕರಿಸದೆ ಇದ್ದುದರಿಂದ ಸಂಶಯಗೊಂಡು ಬಾಗಿಲು ತೆರೆದು ನೋಡಿದಾಗ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ಪತ್ರೆಗೆ ತಲುಪಿಸಿ ತಪಾಸಣೆ ನಡೆಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ಧೃಡೀಕರಿಸಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News