×
Ad

ಕಾಸರಗೋಡು: ಜ್ಯುವೆಲ್ಲರಿ ಮಾಲಕ ಭುವನೇಶ ಆಚಾರ್ಯ ನಿಧನ

Update: 2023-07-08 11:17 IST

ಕಾಸರಗೋಡು: ಪೇಟೆಯ ತುಳಸಿ ಜ್ಯುವೆಲ್ಲರಿ ಮಾಲಕ ದಿ.ಚಂದ್ರಶೇಖರ ಆಚಾರ್ಯರ ಪುತ್ರ ಬಟ್ಟಂಪಾರೆ ಭುವನೇಶ ಆಚಾರ್ಯ ಯಾನೆ ಅಪ್ಪಿ (51) ಶುಕ್ರವಾರ ಮಧ್ಯಾಹ್ನ ಕಾಸರಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹಳೆ ಬಸ್ಟ್ಯಾಂಡ್ ಬಳಿಯ ಒಳ ರಸ್ಥೆ ಯಲ್ಲಿ ತುಳಸಿ ಜುವೆಲ್ಲರಿ ನಡೆಸುತ್ತಿದ್ದ ಇವರು ತಾಯಿ ಜಲಜ, ಪತ್ನಿ ಪ್ರಪುಲ್ಲ ಮಕ್ಕಳಾದ ತುಷಾರ್,ಪ್ರಥಮ್ , ಸಹೋದರರಾದ ಶಶಿಧರ, ಲೀಲಾಧರ,ಶಾಂತರಾಮ ಸಹೋದರಿ ತುಳಸಿ ಮಣಿ ಹಾಗೂ ಅಪಾರ ಬಂಧು ಮಿತ್ರರನ್ನಗಲಿದ್ದಾರೆ.

ಮೃತರು ಅಶೋಕ್ ನಗರ ಸ್ಪೋರ್ಟ್ಸ್ ಕ್ಲಬ್ ಸದಸ್ಯರೂ ಕಬ್ಬಡ್ಡಿ ಪಟು ಆಗಿದ್ದರು .ಮೃತರ ಮನೆಗೆ ಮರ್ಜೆಂಟ್ ಅಸೋಸಿಯೇಷನ್, ಆಲ್ ಕೇರಳಗೋಲ್ಡ್ ವರ್ಕರ್ಸ್ ಯೂನಿಯನ್, ಕಬ್ಬಡ್ಡಿ ಜಿಲ್ಲಾ ಪ್ರಸಿಡೆಂಟ್ ಭೇಟಿ ನೀಡಿ ಸಂತಾಪ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News