×
Ad

ಕಾಸರಗೋಡು : ಕಿಯೂರು ಅಳಿವೆ ಬಾಗಿಲಿನಲ್ಲಿ ಯುವಕ ನೀರುಪಾಲು; ಮುಂದುವರಿದ ಶೋಧ ಕಾರ್ಯ

Update: 2024-09-05 14:15 IST

ಕಾಸರಗೋಡು : ಕಿಯೂರು ಅಳಿವೆ ಬಾಗಿಲಿನಲ್ಲಿ ನೀರುಪಾಲಾಗಿದ್ದ ಯುವಕನ ಮೃತದೇಹಕ್ಕಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.

 ಮುಹಮ್ಮದ್ ರಿಯಾಝ್  ನೀರುಪಾಲಾದ ಯುವಕ. ಆಗಸ್ಟ್ 31 ರಂದು ಘಟನೆ ನಡೆದಿದ್ದು, ಕಿಯೂರು ಕಡಪ್ಪುರ ಅಳಿವೆ ಬಾಗಿಲಿನಲ್ಲಿ ಮೀನು ಹಿಡಿಯಲು ಗಾಳ ಹಾಕುತ್ತಿದ್ದಾಗ ನೀರಿಗೆ ಬಿದ್ದು ರಿಯಾಝ್ ನಾಪತ್ತೆಯಾಗಿದ್ದರು.

ರಿಯಾಝ್ ಗಾಗಿ ಕಳೆದ ಐದು ದಿನಗಳಿಂದ ಶೋಧ ನಡೆಸಲಾಗುತ್ತಿದೆ. ಈ ನಡುವೆ ಮುಳುಗು ತಜ್ಞ ಈಶ್ವರ ಮಲ್ಪೆ ಬುಧವಾರ ಆಗಮಿಸಿ ಶೋಧ ನಡೆಸಿದರೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ನೌಕಾ ಪಡೆಯ ಸ್ಕೂಬಾ ಡೈವಿಂಗ್ ಗುರುವಾರ ತಂಡ ಬೆಳಗ್ಗಿನಿಂದ ಶೋಧ ಕಾರ್ಯ ಆರಂಭಿಸಿದ್ದು, ಕಿಯೂರಿನಿಂದ ತಲಶ್ಶೇರಿ ತನಕ ಶೋಧ ನಡೆಸಲಿದೆ ಎಂದು ತಿಳಿದು ಬಂದಿದೆ.

ಐದು ದಿನಗಳಿಂದ ಪೊಲೀಸ್, ಕಂದಾಯ ಇಲಾಖೆ , ಅಗ್ನಿ ಶಾಮಕ ದಳ, ಕರಾವಳಿ ಪೊಲೀಸ್ , ಮೀನುಗಾರಿಕಾ ಇಲಾಖೆ ಹಾಗೂ ನಾಗರಿಕರು ಶೋಧ ನಡೆಸಿದ್ದಾರೆ. ಸೆ.2 ರಂದು ಕರಾವಳಿ ಪಡೆಯ ಹೆಲಿಕಾಪ್ಟರ್ ಬಳಸಿ ಶೋಧ ನಡೆಸಲಾಗಿತ್ತು.  



Delete Edit


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News