ಲೋಕಸಭಾ ಚುನಾವಣೆ: ಕಾಸರಗೋಡಿನಲ್ಲಿ ಬಿರುಸಿನ ಮತದಾನ

Update: 2024-04-26 08:58 GMT

ಕಾಸರಗೋಡು : ಕಾಸರಗೋಡಿನಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಅಭ್ಯರ್ಥಿಗಳು ಬೆಳಿಗ್ಗೆಯೇ ತಮ್ಮ ಹಕ್ಕು ಚಲಾಯಿಸಿದ್ದಾರೆ.  ಬೆಳಿಗ್ಗೆ 10 . 30 ರ ತನಕ ಶೇಕಡಾ 22 ರಷ್ಟು ಮತದಾನವಾಗಿತ್ತು.

ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಪಡನ್ನಕ್ಕಾಡ್ ಎಸ್.ಎನ್. ಟಿ .ಟಿ. ಐ ಶಾಲೆಯ ಮತಗಟ್ಟೆಯಲ್ಲಿ , ಸಿಪಿಐಎಂ ಅಭ್ಯರ್ಥಿ ಎಂ .ವಿ ಬಾಲಕೃಷ್ಣನ್ ಕ್ಲಾಯಿಕ್ಕೋಡ್ ಜಿಯುಪಿ ಶಾಲೆಯಲ್ಲಿ, ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಮಂಜೇಶ್ವರ ವಾಣಿವಿಜಯ ಎಯುಪಿ ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಕಾಞಂಗಾಡ್ ಹಾಗೂ ಪೆರ್ಲದ ಮತಗಟ್ಟೆಯೊಂದರಲ್ಲಿ ಮತಯಂತ್ರದ ತಾಂತ್ರಿಕ ದೋಷದಿಂದ ಮತದಾನ ಅಲ್ಪ ವಿಳಂಬಗೊಂಡಿದೆ. ಉಳಿದಂತೆ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ .

9 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, 14,52,230 ಮಂದಿ ಮತದಾರರಿದ್ದಾರೆ. 1,334 ಮತಗಟ್ಟೆ ಗಳನ್ನು ಸಜ್ಜುಗೊಳಿಸಲಾಗಿದೆ. ಕರ್ತವ್ಯಕ್ಕೆ 4,561 ಸಿಬಂದಿಗಳನ್ನು ನೇಮಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News