×
Ad

ಮಂಜೇಶ್ವರ: ವರ್ಕಾಡಿಯಲ್ಲಿ ಮನೆ ಮೇಲೆ ಗುಂಡಿನ ದಾಳಿ

Update: 2025-07-03 12:15 IST

ಮಂಜೇಶ್ವರ: ವರ್ಕಾಡಿ ಯಲ್ಲಿ ಮನೆಯೊಂದಕ್ಕೆ ಗುರುವಾರ ತಡರಾತ್ರಿ ಗುಂಡಿನ ದಾಳಿ ನಡೆದಿರುವ ಘಟನೆ ವರದಿಯಾಗಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ವರ್ಕಾಡಿ ಜಂಕ್ಷನ್ ಸಮೀಪದ ನಲ್ಲೆಂಗಿಪದವಿನ ಬಿ. ಎಂ ಹರೀಶ್ ರವರ ಮನೆಯ ಮೇಲೆ ತಡರಾತ್ರಿ ಎರಡೂವರೆ ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಮನೆಯ ಕಿಟಿಕಿ ಗಾಜುಗಳು ಒಡೆದಿವೆ. ಶಬ್ದ ಕೇಳಿ ಗಮನಿಸಿದಾಗ ದುಷ್ಕರ್ಮಿಗಳು ಕಾರು ಮತ್ತು ಬೈಕ್ ನಲ್ಲಿ ಪರಾರಿಯಾಗಿರುವುದಾಗಿ ಹರೀಶ್ ಮಂಜೇಶ್ವರ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಂಜೇಶ್ವರ ಠಾಣಾ ಪೊಲೀಸರು ಸ್ಥಳ ಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಫಾರೆನ್ಸಿಕ್ ತಜ್ಞರು ಮಾಹಿತಿ ಕಲೆ ಹಾಕಿದ್ದಾರೆ.

ಈ ಪ್ರದೇಶದಲ್ಲಿ ಹಂದಿ ಗಳ ಕಾಟ ಹೆಚ್ಚಾಗಿದ್ದು,ಬೇಟೆಗಾರರು ಹಾರಿಸಿದ ಗುಂಡು ಗುರಿತಪ್ಪಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News