×
Ad

ಮುಹಿಮ್ಮಾತ್ ಸೀನಿಯರ್ ಸೆಕ್ರೆಟರಿ ಎಂ ಅಂದುಂಞಿ ಮೊಗರ್ ನಿಧನ

Update: 2023-07-30 22:11 IST

ಪುತ್ತಿಗೆ: ಮುಹಿಮ್ಮಾತ್ ಸೀನಿಯರ್ ಸೆಕ್ರೆಟರಿ ಹಾಗೂ ಸುನ್ನೀ ಮ್ಯಾನೇಜ್ಮೆಂಟ್ ಅಸೋಶಿಯೇಷನ್ (ಎಸ್ ಎಂ ಎ) ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಎಂ ಅಂದುಂಞಿ ಮೊಗರ್ (72) ನಿಧನರಾದರು.

ಮುಹಿಮ್ಮಾತ್ ಸ್ಥಾಪಿತ ಕಾಲದಿಂದಲೂ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳರೊಂದಿಗೆ ಸುನ್ನೀ ಸಂಘ ಸಂಸ್ಥೆಗಳ ಕಾರ್ಯಾಚರಣೆಗಳಲ್ಲಿ ಮುಂಚೂಣೀಯಲ್ಲಿದ್ದ ಅವರು ಎಸ್ ವೈ ಎಸ್ ಪುತ್ತಿಗೆ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಮೇಖಲ, ಝೋನ್ ಹಾಗೂ ಜಿಲ್ಲಾ ಕಾರ್ಯದರ್ಶಿ ಸ್ಥಾನಗಳನ್ನು ಅಲಂಕರಿಸಿದ್ದರು. ಎಸ್ ಎಂ ಎ ಸಾರಥಿ ಎಂಬ ನೆಲೆಯಲ್ಲಿ ವಿವಿಧ ಮೊಹಲ್ಲಾಗಳ ಶಕ್ತೀಕರಣಕ್ಕೆ ನೇತೃತ್ವ ನೀಡಿದರು.

ಮೊಗರಡ್ಕ ಜಮಾಅತಿನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಗಳನ್ನು ನಿಭಾಯಿಸಿದ್ದರು. ಮಂಜೇಶ್ವರ ಕುಂಬ್ಳೆ ಸಂಯುಕ್ತ ಜಮಾಅತಿನ ಕಾರ್ಯದರ್ಶಿ ಸ್ಥಾನವನ್ನು ಸಹ ವಹಿಸಿಕೊಂಡಿದ್ದರು. ಜಿ.ಸಿ.ಸಿ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಮಾಲಿಕ್ ದೀನಾರ್ ಕಲ್ಚರಲ್ ಫಾರಂ ಪ್ರಾಯೋಜಿತ ಚೊಚ್ಚಲ ತ್ವಾಹಿರುಲ್ ಅಹ್ದಲ್ ಸ್ಮಾರಕ ಅವಾರ್ಡ್ಗೆ ಅರ್ಹರಾಗಿದ್ದರು.

ಕಿಡ್ನಿ ಸಂಬಂಧಿಸಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರವಿವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ರಾತ್ರಿ ಮುಹಿಮ್ಮಾತ್ ಕಬರ್‌ಸ್ಥಾನದಲ್ಲಿ ದಫನ ಮಾಡಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News