ಮಂಜೇಶ್ವರ | ರಸ್ತೆ ಅಪಘಾತದ ಗಾಯಾಳು ಯುವಕ ಮೃತ್ಯು
Update: 2025-06-01 12:24 IST
ಕೆಲ್ವಿನ್ ಪ್ರಿನ್ಸ್ ಡಿಸೋಜ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ ರಾಗಂ ಜಂಕ್ಷನ್ ಬಳಿ ಕಾರು ಮತ್ತು ಬಸ್ಸು ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕನೋರ್ವ ಮೃತಪಟ್ಟಿದ್ದಾನೆ.
ಕಾರು ಪ್ರಯಾಣಿಕ ವರ್ಕಾಡಿ ತೋಕೆ ನಿವಾಸಿ ಕೆಲ್ವಿನ್ ಪ್ರಿನ್ಸ್ ಡಿ ಸೋಜ(18) ಮೃತಪಟ್ಟ ಯುವಕ.
ಮೇ 30ರಂದು ಬೆಳಗ್ಗೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಗಾಯಗೊಂಡಿದ್ದ ಕೆಲ್ವಿನ್ ಪ್ರಿನ್ಸ್ ಡಿಸೋಜ, ಪ್ರಜ್ವಲ್ (24) ಮತ್ತು ಪ್ರೀತಂ (19) ಎಂವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಗಂಭೀರಾವಸ್ಥೆಯಲ್ಲಿದ್ದ ಕೆಲ್ವಿನ್ ಡಿಸೋಜ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.