×
Ad

ಕೇರಳದಲ್ಲಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಬಸ್‌ ಮಾಲಕರಿಂದ ಮುಷ್ಕರ

Update: 2025-07-08 09:51 IST

ಖಾಸಗಿ ಬಸ್ ಮುಷ್ಕರದ ಹಿನ್ನಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ಸನ್ನು ಅವಲಂಬಿಸುತ್ತಿರುವ ಸಾರ್ವಜನಿಕರು

ಕಾಸರಗೋಡು : ಪ್ರಯಾಣ ದರ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಬಸ್ಸು ಮಾಲಕರು ಕೇರಳದಲ್ಲಿ ಇಂದು ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಬೇಡಿಕೆ ಈಡೇರಿಸದಿದ್ದಲ್ಲಿ ಜುಲೈ 23 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬಸ್ಸು ಮಾಲಕರ ಸಂಘ ಮುನ್ನೆಚ್ಚರಿಕೆ ನೀಡಿದೆ.

ವಿದ್ಯಾರ್ಥಿಗಳ ರಿಯಾಯಿತಿ ಪ್ರಯಾಣ ದರ ಕನಿಷ್ಠ 5ರೂ.ಗೆ ಏರಿಸಬೇಕು ಹಾಗೂ ಇನ್ನಿತರ ಬೇಡಿಕೆಗಳು ಸಂಘ ಮುಂದಿಟ್ಟಿದೆ. ಮುಷ್ಕರದ ಬಗ್ಗೆ ಬಸ್ಸು ಮಾಲಕರ ಸಂಘದ ಮುಖಂಡರ ಜೊತೆ ಸಾರಿಗೆ ಆಯುಕ್ತರು ಮಾತುಕತೆ ನಡೆಸಿದರೂ ವಿಫಲ ಗೊಂಡಿದೆ.

ಖಾಸಗಿ ಬಸ್ಸು ಮುಷ್ಕರದ ಹಿನ್ನಲೆಯಲ್ಲಿ ಕೆ ಎಸ್ ಆರ್ ಟಿ ಸಿ ಹೆಚ್ಚುವರಿ ಬಸ್ಸುಗಳನ್ನು ರಸ್ತೆಗಿಳಿಸಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಇತರ ಪ್ರಯಾಣಿಕರು ಮುಷ್ಕರ ದಿಂದ ಸಮಸ್ಯೆಗೆ ಸಿಲುಕಿದ್ದು, ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ. ಆದರೆ ನಗರ ಪ್ರದೇಶಗಳಲ್ಲಿ ಮುಷ್ಕರದ ಬಿಸಿ ಮುಟ್ಟಿಲ್ಲ. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News