×
Ad

ತಮಿಳುನಾಡಿನಲ್ಲಿ ರಸ್ತೆ ಅಪಘಾತ | ಕಾಸರಗೋಡು ಮೂಲದ ವೈದ್ಯಕೀಯ ವಿದ್ಯಾರ್ಥಿ ಮೃತ್ಯು

Update: 2024-09-19 15:34 IST

ಮುಹಮ್ಮದ್ ರಾಶಿದ್

ಕಾಸರಗೋಡು : ತಮಿಳುನಾಡಿನ ಕೊಯಂಬತ್ತೂರುನಲ್ಲಿ ನಡೆದ ಅಪಘಾತದಲ್ಲಿ ಸೀತಾಂಗೋಳಿ ಕಟ್ಟತ್ತಡ್ಕ ನಿವಾಸಿಯಾದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ .

ಕಟ್ಟತ್ತಡ್ಕ ಎಕೆಜಿ ನಗರದ ಮುಹಮ್ಮದ್ ರಾಶಿದ್ (20) ಮೃತಪಟ್ಟ ವಿದ್ಯಾರ್ಥಿ. ಕೊಯಂಬತ್ತೂರುನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದ ಮುಹಮ್ಮದ್ ರಾಶಿದ್  ರಾತ್ರಿ ಎಂಟು ಗಂಟೆ ಸುಮಾರಿಗೆ ಆಹಾರ ಸೇವಿಸಲು ಹೋಟೆಲ್‌ಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಅತೀ ವೇಗದಿಂದ ಬಂದ ಟಿಪ್ಪರ್ ಲಾರಿಯೊಂದು ಢಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ರಾಶೀದ್ ನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಗಲ್ಫ್ ನಲ್ಲಿರುವ ತಂದೆ ಅಹಮ್ಮದ್ ಊರಿಗೆ ಮರಳಿದ್ದಾರೆ. ರಜೆಯಲ್ಲಿ ಊರಿಗೆ ಬಂದಿದ್ದ ರಾಶಿದ್ ಒಂದು ವಾರದ ಹಿಂದೆ ಕೊಯಂಬತ್ತೂರಿಗೆ ಮರಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News