ಎಸೆಸೆಲ್ಸಿ ಪರೀಕ್ಷೆ : ವೈಷ್ಣವಿ ಶೆಟ್ಟಿ ಉತ್ತಮ ಸಾಧನೆ
Update: 2025-05-13 10:23 IST
ವೈಷ್ಣವಿ ಶೆಟ್ಟಿ
ಮಂಜೇಶ್ವರ : 2024-25 ನೇ ಶೈಕ್ಷಣಿಕ ವರ್ಷದಲ್ಲಿ ಕೇರಳ ಸರಕಾರವು ನಡೆಸಿದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಂಜೇಶ್ವರದ ಕೊಡ್ಲಮೊಗರಿನ ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಶೆಟ್ಟಿ ಎಲ್ಲಾ ವಿಷಯದಲ್ಲಿ A+ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ವೈಷ್ಣವಿ ಶೆಟ್ಟಿ ಕೇರಳ ಸ್ಟೇಟ್ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನಡೆಸಲ್ಪಡುವ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರತಿಷ್ಠಿತ ರಾಜ್ಯ ಪುರಸ್ಕಾರವನ್ನು ಪಡೆದಿದ್ದಾರೆ.
ಎರ್ನಾಕುಲಂನಲ್ಲಿ ನಡೆದ ಕೇರಳ ರಾಜ್ಯ ಮಟ್ಟದ ಜೂನಿಯರ್ ಗರ್ಲ್ಸ್ ವಿಭಾಗದ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಕ್ರೀಡೆಯಲ್ಲೂ ಸಾಧನೆ ಮಾಡಿರುವ ವೈಷ್ಣವಿ ಶೆಟ್ಟಿ ಮಂಜೇಶ್ವರದ ಬಾಕ್ರಬೈಲಿನ ಹರೀಶ್ ಶೆಟ್ಟಿ ಹಾಗೂ ಶಿಕ್ಷಕಿ ಶಕೀಲಾ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದಾರೆ.