×
Ad

ಉಪ್ಪಳ: ನಕಲಿ ವೈದ್ಯನ ಬಂಧನ

Update: 2024-10-17 15:53 IST

ಕಾಸರಗೋಡು: ನಕಲಿ ವೈದ್ಯನೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪಾಲಕ್ಕಾಡ್ ಮಣ್ಣಾರ್ ಕ್ಕಾಡ್ ನ ಸಿ.ಎಂ.ಜಮಾಲುದ್ದೀನ್(56) ಬಂಧಿತ ಆರೋಪಿ. ಉಪ್ಪಳ ಪಚ್ಲಂಪಾರೆಯಿಂದ ಈತನನ್ನು ಬಂಧಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ಪಚ್ಲಂಪರೆಯಲ್ಲಿ ಕ್ಲಬ್ ವತಿಯಿಂದ ಆಯೋಜಿಸಿದ್ದ ವೈದ್ಯಕೀಯ ಶಿಬಿರದಲ್ಲಿ ಈತ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಿದ್ದನು. ಇದರಿಂದ ಸಂಶಯಗೊಂಡ ಶಿಬಿರಾರ್ಥಿಗಳು ಪೊಲೀಸ್ ದೂರು ನೀಡಿದ್ದರು. ಅದರಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈತ ಹಲವೆಡೆ ವೈದ್ಯಕೀಯ ಶಿಬಿರ ಆಯೋಜಿಸಿ ಚಿಕಿತ್ಸೆ ನೀಡಿರುವುದಾಗಿ ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News