ಉಪ್ಪಳ | ಫ್ಲ್ಯಾಟ್ ಕಾವಲುಗಾರನ ಕೊಲೆ ಪ್ರಕರಣದ ಆರೋಪಿಯ ಬಂಧನ
Update: 2025-02-13 11:52 IST
ಕಾಸರಗೋಡು: ಉಪ್ಪಳದಲ್ಲಿ ಎರಡು ದಿನಗಳ ಹಿಂದೆ ನಡೆದ ಫ್ಲ್ಯಾಟ್ ವೊಂದರ ಕಾವಲುಗಾರ ಪಯ್ಯನ್ನೂರಿನ ಸುರೇಶ್ (45) ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉಪ್ಪಳ ಪತ್ವಾಡಿಯ ಸವಾದ್(22) ಬಂಧಿತ ಆರೋಪಿ. ಮಂಗಳವಾರ ರಾತ್ರಿ ಉಪ್ಪಳ ಪೇಟೆಯಲ್ಲಿ ಸುರೇಶ್ ಮತ್ತು ಸವಾದ್ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಇದು ವಿಕೋಪಕ್ಕೆ ತಿರುಗಿದ್ದು, ಸುರೇಶ್ ರನ್ನು ಆರೋಪಿ ಸವಾದ್ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಸವಾದ್ ಆ್ಯಂಬುಲೆನ್ಸ್ ಕಳವು ಸೇರಿದಂತೆ ಮೂರಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.