×
Ad

ಕಾಸರಗೋಡು: ಮೊಬೈಲ್ ಟವರ್ ಏರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ ಯುವಕ

Update: 2023-06-30 15:19 IST

ಕಾಸರಗೋಡು, ಜೂ.30: ಪಾನಮತ್ತನಾಗಿ ಮೊಬೈಲ್ ಟವರ್ ಗೆ ಏರಿದ ಯುವಕನೋರ್ವ ಆತ್ಮಹತ್ಯೆ ಬೆದರಿಕೆಯೊಡ್ಡಿದ ಘಟನೆ ಗುರುವಾರ ಸಂಜೆ ನಗರದ ಹಳೆ ಬಸ್ ನಿಲ್ದಾಣ ಸಮೀಪ ನಡೆದಿದೆ.

ಸಂಜೆ ಏಳು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಿರುವನಂತಪುರದ ಸಜಿನ್ ಲಾಲ್ ಆತ್ಮಹತ್ಯೆ ಬೆದರಿಕೆ ಒಡ್ಡಿದ ಯುವಕ. ಆತನನ್ನು ಕೆಳಗಿಸಲು ಸುಮಾರು ಒಂದು ಗಂಟೆಗಳ ಕಾಲ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟರು ಸಾಧ್ಯವಾಗಲಿಲ್ಲ. ಕೊನೆಗೆ ಮನವೊಲಿಸಿ ಆತನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದರು.


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News