×
Ad

ಮನೆ ಹೊರಗೆ ಬಿಚ್ಚಿಟ್ಟಿದ್ದ ಶೂ ಒಳಗೆ ಬುಸುಗುಟ್ಟಿದ ನಾಗರಹಾವು!

Update: 2023-09-15 16:29 IST

ಮಡಿಕೇರಿ ಸೆ.15: ಮನೆ ಹೊರಗೆ ಬಿಚ್ಚಿಟ್ಟಿದ್ದ ಶೂ ಅನ್ನು ಇವತ್ತು ಧರಿಸಲು ಮುಂದಾದಾಗ ಅದರಲ್ಲಿ ನಾಗರ ಹಾವು ಕಂಡುಬಂದ ಘಟನೆ ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿ ಗ್ರಾಮದ ಶಾಲಿ ಎಂಬುವವರು ಮನೆಯ ಹೊರ ಭಾಗದಲ್ಲಿ ಇಟ್ಟಿದ್ದ ಶೂ ಒಳಗೆ ಹಾವು ಸೇರಿಕೊಂಡಿತ್ತು. ಇಂದು ಬೆಳಗ್ಗೆ ಕೆಲಸಕ್ಕೆಂದು ತೆರಳಲು ಶೂ ತೆಗೆದಾಗ ಹಾವು ಕಂಡುಬಂದಿದೆ.

ತಕ್ಷಣ ಸ್ನೇಕ್ ಸುರೇಶ್ ಪೂಜಾರಿ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಸುರೇಶ್ ಹಾವನ್ನು ಸೆರೆ ಹಿಡಿದು ನಂತರ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News