B.Com ಪರೀಕ್ಷೆ : ಅಫ್ಸಾ ಪರ್ವೀನ್ ಕಾಲೇಜಿಗೆ ಅಗ್ರಸ್ಥಾನಿ
Update: 2026-07-28 13:28 IST
ಅಫ್ಸಾ ಪರ್ವೀನ್
ವಿರಾಜಪೇಟೆ : ಪ್ರಸಕ್ತ ಸಾಲಿನ B.Com ಪರೀಕ್ಷೆಯಲ್ಲಿ ವಿರಾಜಪೇಟೆಯ ಸೇಂಟ್ ಆನ್ಸ್ ಪದವಿ ಕಾಲೇಜಿನ ವಿದ್ಯಾರ್ಥಿನಿ ಅಫ್ಸಾ ಪರ್ವೀನ್ 9.7 ಸಿಜಿಪಿಎ ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ವಿರಾಜಪೇಟೆ ನಿವಾಸಿ ಶಫಿ ಅಹ್ಮದ್ ಹಾಗು ಸಫಿಯಾ ಬಾನು ದಂಪತಿಯ ಸುಪುತ್ರಿ ಹಾಗೂ ಮೊಹಮ್ಮದ್ ಫರ್ಹಾನ್ ಅವರ ಪತ್ನಿ.