×
Ad

ಹರದೂರು ಗ್ರಾ.ಪಂ ಉಪಾಧ್ಯಕ್ಷರ ಚುನಾವಣೆ: ಎಂ.ಎ.ಮುಸ್ತಫಾ ಅವಿರೋಧ ಆಯ್ಕೆ

Update: 2025-04-03 13:40 IST

ಹರದೂರು ಗ್ರಾ.ಪಂ ಉಪಾಧ್ಯಕ್ಷರ ಚುನಾವಣೆ: ಅವಿರೋಧ ಆಯ್ಕೆಯಾದ ಎಂ.ಎ.ಮುಸ್ತಫಾ

ಕುಶಾಲನಗರ,ಏ3: ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಹರದೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಎಂ.ಎ.ಮುಸ್ತಫಾ ಅವರು ಆಯ್ಕೆಯಾಗಿದ್ದಾರೆ.

ಗುರುವಾರ ಹರದೂರು ಗ್ರಾ.ಪಂ ನಲ್ಲಿ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಎ.ಮುಸ್ತಫಾರವರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭ ಮಾತನಾಡಿದ ನೂತನ ಉಪಾಧ್ಯಕ್ಷ ಎಂ.ಎ.ಮುಸ್ತಫಾ, ಸರ್ವ ಸದಸ್ಯರ ಬೆಂಬಲದೊಂದಿಗೆ ಹರದೂರು ಗ್ರಾ.ಪಂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ.‌ ಮುಂದಿನ ದಿನಗಳಲ್ಲಿಯೂ ಎಲ್ಲಾ ಸದಸ್ಯರ ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಪಂಚಾಯಿತಿಯ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದೇಗೌಡರವರು ಚುನಾವಣೆಯನ್ನು ನಡೆಸಿಕೊಟ್ಟರು. ಕುಶಾಲನಗರದ ಗೆಳೆಯರ ಬಳಗದ ಸದಸ್ಯರು, ಸ್ಥಳೀಯ ಸಾರ್ವಜನಿಕರು ನೂತನ ಉಪಾಧ್ಯಕ್ಷ  ಎಂ.ಎ.ಮುಸ್ತಫಾರವರಿಗೆ ಶುಭಾಶಯ ತಿಳಿಸಿದರು.

ಈ ಸಂದರ್ಭ ಹರದೂರು ಗ್ರಾ.ಪಂ ಅಧ್ಯಕ್ಷರಾದ ಎ.ಎ.ಬೋಜಮ್ಮ, ಕೆ.ಕೆ.ರಮೇಶ್, ಕುಸುಮ, ಸರೋಜ, ಎಸ್.ಕೆ.ಅಬ್ದುಲ್ ಸಲಾಂ, ಬಿ.ಡಿ.ಪದ್ಮನಾಭ, ಸುಬ್ಬಯ್ಯ, ಪಿಡಿಓ ಪೂರ್ಣಿಮ, ಸಿಬ್ಬಂದಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News