×
Ad

ಕೊಡ್ಲಿಪೇಟೆ: ಇಂದಿನಿಂದ ಮಜ್ಲಿಸುನ್ನೂರ್ ದಶವಾರ್ಷಿಕೋತ್ಸವ

Update: 2024-01-14 10:41 IST

ಕೊಡ್ಲಿಪೇಟೆ: ಎಸ್‍ಕೆಎಸ್‍ಎಸ್‍ಎಫ್ ಮತ್ತು ಎಸ್‍ವೈಎಸ್ ಕೊಡ್ಲಿಪೇಟೆ ಶಾಖೆಯ ವತಿಯಿಂದ ಜ.14 ಹಾಗೂ 15ರಂದು ಮಸ್ಜಿದುನ್ನೂರ್ ಹ್ಯಾಂಡ್ ಪೋಸ್ಟ್ ಮುಂಭಾಗದ ಶಂಸುಲ್ ಉಲ️ಮಾ ಮೈದಾನದಲ್ಲಿ ಮಜ್ಲಿಸುನ್ನೂರ್ ದಶವಾರ್ಷಿಕೋತ್ಸವ ಹಾಗೂ ಏಕದಿನ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಎಸ್‍ಕೆಎಸ್‍ಎಸ್‍ಎಫ್ ಕೊಡ್ಲಿಪೇಟೆ ಶಾಖೆಯ ಅಧ್ಯಕ್ಷ ಝಹೀರ್ ನಿಝಾಮಿ ತಿಳಿಸಿದ್ದಾರೆ.

ಜ.14ರಂದು ಸಂಜೆ 7.30ಕ್ಕೆ ಸಮಸ್ತ ಕೇಂದ್ರ ಮುಶಾವರ ಸದಸ್ಯ ಎಂ.ಎಂ.ಅಬ್ದುಲ್ಲಾ ಫೈಝಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಾರ್ಥನೆಗೆ ನೇತೃತ್ವವನ್ನು ಕೊಡಗು ಜಿಲ್ಲಾ ಖಾಝಿ ಸಯ್ಯಿದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ವೈಎಸ್ ಕೊಡ್ಲಿಪೇಟೆ ಶಾಖಾಧ್ಯಕ್ಷ ಇಬ್ರಾಹೀಂ ಕೆ.ಎ. ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜ.15ರಂದು ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಮಸ್ಜಿದುನ್ನೂರ್ ಹ್ಯಾಂಡ್ ಪೋಸ್ಟ್ ಖತೀಬ್ ಉಸ್ತಾದ್ ಹಾರಿಸ್ ಬಾಖವಿ ಉದ್ಘಾಟಿಸಲಿದ್ದು, ಕೇರಳದ ಪತ್ತನಾಫುರಂನ ಅಂತರ್‍ರಾಷ್ಟ್ರೀಯ ಭಾಷಣಕಾರ ಉಸ್ತಾದ್ ಹಾಫಿಲ್ ಸಿರಾಜುದ್ದೀನ್ ಅಲ್ ಖಾಸಿಮಿ ಮುಖ್ಯ ಭಾಷಣವನ್ನು ನಡೆಸಲಿದ್ದಾರೆ ಎಂದು ಝಹೀರ್ ನಿಝಾಮಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್‍ಕೆಎಸ್‍ಎಸ್‍ಎಫ್ ಮತ್ತು ಎಸ್‍ವೈಎಸ್ ಜಿಲ್ಲಾ ನಾಯಕರು, ಸಾಮಾಜಿಕ, ಧಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News