ಎಸೆಸೆಲ್ಸಿ ಮರು ಮೌಲ್ಯ ಮಾಪನ : ತನ್ಮಯಿ ರಾಜ್ಯಕ್ಕೆ ಪ್ರಥಮ
Update: 2025-05-24 00:31 IST
ಮಡಿಕೇರಿ : ಎಸೆಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮರು ಮೌಲ್ಯ ಮಾಪನದಲ್ಲಿ ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಮಡಿಕೇರಿಯ ತನ್ಮಯಿ ಎಂ.ಎನ್. 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮೊದಲು ಲಿತಾಂಶ ಪ್ರಕಟವಾದಾಗ ತನ್ಮಯಿಗೆ ಒಟ್ಟು 622 ಅಂಕ ದೊರೆತಿತ್ತು. ಮರು ಮೌಲ್ಯ ಮಾಪನದಲ್ಲಿ 625 ಅಂಕಗಳು ಲಭಿಸಿದೆ. ತನ್ಮಯಿ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಹಾಗೂ ಸೌಮ್ಯ ದಂಪತಿಯ ಪುತ್ರ.