ಮೈಸೂರಿನಲ್ಲಿ ನಡೆದ ಸಿಎಂ ಕಪ್ ಕ್ರೀಡಾಕೂಟದಲ್ಲಿ ಕೊಪ್ಪಳ ಜಿಲ್ಲೆಯ ಕ್ರೀಡಾ ಪಟುಗಳ ಸಾಧನೆ
ಕೊಪ್ಪಳ : ಮೈಸೂರಿನಲ್ಲಿ ನಡೆದ ದಸರಾ ಹಾಗೂ ಸಿಎಂ ಕಪ್ ಕ್ರೀಡಾಕೂಟದಲ್ಲಿ ಕಲಬುರಗಿ ವಿಭಾಗವನ್ನು ಪ್ರತಿನಿಧಿಸಿದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪಟುಗಳು ಉತ್ತಮ ಪ್ರದರ್ಶನ ನೀಡಿ ಹಲವು ಪದಕಗಳನ್ನು ಗೆದ್ದಿದ್ದಾರೆ.
ವುಶೂ ಮತ್ತು ಟೆಕ್ವಾಂಡೋ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸುಮಾರು ಹತ್ತು ಮಂದಿ ಬಾಲಕಿಯರು ಮೈಸೂರಿನ ಜೊತೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಳಗಾವಿ ವಿಭಾಗದ ಸ್ಪರ್ಧಿಗಳ ವಿರುದ್ಧ ಹೋರಾಟ ನಡೆಸಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.
ಮುಖ್ಯ ತರಬೇತಿದಾರ ಬಾಬುಸಾಬ್ ಅವರ ಮಾರ್ಗದರ್ಶನದಲ್ಲಿ ಸ್ಪರ್ಧಿಸಿದ ಈ ಪಟುಗಳು ತಮ್ಮ ಶ್ರೇಷ್ಠ ಸಾಧನೆಯ ಮೂಲಕ ಕೊಪ್ಪಳ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿಜೇತರಾದ ಕ್ರೀಡಾಪಟುಗಳು :
ವುಶೂ ಕ್ರೀಡೆ :
• ರೇಖಾ – ದ್ವಿತೀಯ ಸ್ಥಾನ
• ಅಸ್ಮಾ – ದ್ವಿತೀಯ ಸ್ಥಾನ
• ಐಶ್ವರ್ಯ – ತೃತೀಯ ಸ್ಥಾನ
• ಆಶಾ – ತೃತೀಯ ಸ್ಥಾನ
• ಆಫ್ರಿನ್ – ತೃತೀಯ ಸ್ಥಾನ
• ದಾನಮ್ಮ – ತೃತೀಯ ಸ್ಥಾನ
• ಯಶೋಧಮ್ಮ – ತೃತೀಯ ಸ್ಥಾನ
• ಮಹ್ಮದಿ ಬೇಗಂ – ತೃತೀಯ ಸ್ಥಾನ
ಟೆಕ್ವಾಂಡೋ ಕ್ರೀಡೆ :
• ಅನುಷಾ – ತೃತೀಯ ಸ್ಥಾನ
• ಅಜಯಕುಮಾರ – ತೃತೀಯ ಸ್ಥಾನ