ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಕೊಡುತ್ತೇವೆ : ವಿವಾದಾತ್ಮಕ ಹೇಳಿಕೆ ನೀಡಿದ ಯತ್ನಾಳ್
ಕೊಪ್ಪಳ: ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಕೊಡುವ ಅಭಿಯಾನ ಆರಂಭಿಸುತ್ತೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರವಿವಾರ ಕೊಲೆಯಾದ ಗವಿಸಿದ್ದಪ್ಪ ಮನೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳನ್ನು ಕೊಲೆ ಮಾಡುವ ಮನಸ್ಥಿತಿ ಮುಸ್ಲಿಂರಲ್ಲಿದೆ. ಮಸೀದಿಯ ಮುಂದೆಯೇ ಗವಿಸಿದ್ದಪ್ಪ ಕೊಲೆಯಾಗಿದೆ. ಈ ಸಂದರ್ಭದಲ್ಲಿ ತಡೆಯುವ ಕೆಲಸ ಯಾಕೆ ಯಾರೂ ಮಾಡಲಿಲ್ಲ. ಆರೋಪಿ ರಿಲ್ಸ್ ನಲ್ಲಿ ಮಚ್ಚು ತೋರಿಸಿದ್ದಾನೆ, ಆದರೂ ಕ್ರಮ ಕೈಗೊಂಡಿಲ್ಲ, ನಾಲ್ಕು ಜನರನ್ನು ಬಂಧಿಸಿದ್ದಾರೆ, ಆ ಯುವತಿಯನ್ನೂ ಬಂಧಿಸಬೇಕು ಎಂದು ಹೇಳಿದರು.
ಲವ್ ಜಿಹಾದ್ ಮಾಡಿದಾಗ ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಸಾಂತ್ವಾನ ಹೇಳಿದರೆ ಸಾಲದು. ಕುಟುಂಬದ ನೆರವಿಗೆ ಬರಬೇಕು. ಈ ಸರಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಕುರಿತು ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ ಎಂದು ಹೇಳಿದರು.
ಆ.11ರಂದು ನಡೆಯುವ ಪ್ರತಿಭಟನೆಗೆ ಎಲ್ಲರೂ ಸಹಕರಿಸಬೇಕು. ಇದೇ ನೆಪ ಮಾಡಿಕೊಂಡು ಗಣೇಶ ಹಬ್ಬಕ್ಕೆ ಅಡ್ಡಿಪಡಿಸಬಾರದು. ಸಿಎಂ ಸಿದ್ದರಾಮಯ್ಯ ಅವರು ಈ ಘಟನೆಗೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಪೊಲೀಸರಿಗೆ ಮುಸ್ಲಿಮರು ಅಪರಾಧಿಗಳು ಅಲ್ಲ ಎಂದು ಬಿಂಬಿಸುವ ಒತ್ತಡ ಹಾಕಲಾಗುತ್ತಿದೆ. ಹಿಂದೂ ಪರವಾಗಿ ಹಿಂದುಳಿದವರು ಮಾತನಾಡಬಾರದು ಎಂಬ ಧೋರಣೆ ಸರಿ ಅಲ್ಲಎಂದು ಹೇಳಿದರು.
ಡ್ರಗ್ಸ್ ಗಾಂಜಾದ ಬಗ್ಗೆ ಗೃಹ ಸಚಿವರು ಉಡಾಫೆಯಾಗಿ ಮಾತನಾಡುತ್ತಾರೆ. ಈ ಘಟಯಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿದೆ. ಈ ಸರಕಾರ ಸಾಬರ ಸರಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.