×
Ad

ಕನಕಗಿರಿ- ಕಾರಟಗಿ ಪ್ರವಾಸಿ ಮಂದಿರ, ಸಾಂಸ್ಕೃತಿಕ ಭವನ ಶೀಘ್ರದಲ್ಲೇ ಲೋಕಾರ್ಪಣೆ: ಸಚಿವ ಶಿವರಾಜ್ ತಂಗಡಗಿ

Update: 2025-12-02 19:00 IST

ಕನಕಗಿರಿ: ಕನಕಗಿರಿ ಮತ್ತು ಕಾರಟಗಿ ತಾಲೂಕಿನ ಸಾಂಸ್ಕೃತಿಕ ಭವನ ಹಾಗೂ ಪ್ರವಾಸಿ ಮಂದಿರವನ್ನು ಇನ್ನು ಒಂದು ತಿಂಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದರು.

ಕನಕಗಿರಿ ತಾಲೂಕಿನ ಪ್ರವಾಸಿ ಮಂದಿರದ ಕಟ್ಟಡ ಕಾಮಗಾರಿ ಹಾಗೂ ನೂತನ ಸಾಂಸ್ಕೃತಿಕ ಭವನಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಇನ್ನು ಒಂದು ತಿಂಗಳಲ್ಲಿ ಪ್ರವಾಸಿ ಮಂದಿರ ಕಾಮಗಾರಿ ಪೂರ್ಣಗೊಳ್ಳಬೇಕು. ಕೂಡಲೇ ಲೋಕಾರ್ಪಣೆಗೆ ದಿನಾಂಕ‌ ನಿಗದಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

2.85 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಾಗಿದೆ. ಇದರಿಂದ ಕನಕಗಿರಿಯ ಕಾರ್ಯಕ್ರಮ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಕಟ್ಟಡದ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲು ಅನುದಾನ ನೀಡಲಾಗುವುದು. ಕಟ್ಟಡದ ಬಳಿ ದಿನದ 24 ಗಂಟೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ಸ್ವಚ್ಛತೆಯನ್ನು‌ ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ತಿಳಿಸಿದರು. ಇದಕ್ಕೂ ಮುನ್ನ ಸಚಿವರು ಕನಕಗಿರಿ ತಾಲೂಕಿನಲ್ಲಿ ಅಂದಾಜು 40 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಹಾಗೂ ಮೇಲ್ಸೇತುವೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗಂಗಾಧರ್, ನಿರಲೂಟಿ ಸಿದ್ಧಪ್ಪ, ರಮೇಶ್ ನಾಯಕ್, ಸಿದ್ದನಗೌಡ, ವಿಜಯ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News