ವಿಕಲ ಚೇತನರಿಗೆ ಅನುಕಂಪಕ್ಕಿಂತ ಅವಕಾಶ ನೀಡುವುದು ಅವಶ್ಯಕವಾಗಿದೆ: ಅಮ್ಜದ್ ಪಟೇಲ್
ಕೊಪ್ಪಳ: ವಿಕಲಚೇತನರು ಶಿಕ್ಷಣ ಸಂಗೀತ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ಕೀರ್ತಿ ಪಡೆದು ಹೆಸರು ಮಾಡಿದ್ದಾರೆ, ಯಾವುದೇ ಕ್ಷೇತ್ರದಲ್ಲಾಗಲಿ ಅವರಿಗೆ ಅವಕಾಶ ನೀಡೋದು ಮುಖ್ಯ ಅವರಿಗೆ ಅನುಕಂಪಕ್ಕಿಂತ ಅವಕಾಶ ನೀಡಿದರೆ ಅವರೇ ತಮ್ಮ ಪ್ರತಿಭೆಗಳ ಮೂಲಕ ಸಾಧನೆ ಮಾಡಿ ತೋರಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಅವರು ಕೊಪ್ಪಳ ನಗರದ ತಾಲೂಕ ಕ್ರೀಡಾಂಗಣದಲ್ಲಿ ಏರ್ಪಡಿಸಿದ ವಿಶ್ವ ವಿಕಲಚೇತನರ ದಿನಾಚರಣೆ ಸಮಾರಂಭದಲ್ಲಿ ವಿಶೇಷ ಆಮಂತ್ರಿಕರಾಗಿ ಪಾಲ್ಗೊಂಡು, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಧಿಕಾರ ಮುಖ್ಯವಲ್ಲ. ಅಧಿಕಾರ ಅವಧಿಯಲ್ಲಿ ಮಾಡುವ ಸೇವೆ ಬಹಳ ಮುಖ್ಯವಾಗಿದೆ. ವಿಕಲ ಚೇತನರಿಗೆ ಸಿಗಬಹುದಾದ ಸರಕಾರದ ಸೌಲಭ್ಯ ಹಾಗೂ ನಗರಸಭೆ ವತಿಯಿಂದ ಸಿಗಬಹುದಾದ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ಹಿಂದೆಯೂ ಕೂಡ ಸಾಕಷ್ಟು ಸೌಲಭ್ಯಗಳನ್ನು ಸಂಘಟನೆಯ ಕೋರಿಕೆ ಮೇರೆಗೆ ನಗರಸಭೆ ವತಿಯಿಂದ ನೀಡಲಾಗಿದೆ. ಮುಂದೆಯೂ ಸಹ ನಿಮ್ಮ ಸಂಘಟನೆ ಜೊತೆಗೆ ನಾನು ಸದಾ ಇರುತ್ತೇನೆ. ನಿಮ್ಮ ಸೇವೆ ಮಾಡುವುದರ ಜೊತೆಗೆ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ನೇರ ಸ್ಪಂದನೆ ನೀಡಿ ಅದರ ಇತ್ಯರ್ಥಕ್ಕಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಸಮಾರಂಭದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪರಶುರಾಮ್ ಶಟ್ಟಪ್ಪನವರ್ ನೆರವೇರಿಸಿದರು.
ವಿಕಲಚೇತನರ ಕಲ್ಯಾಣ ಅಧಿಕಾರಿ ವೆಂಕಟೇಶ್ ದೇಶಪಾಂಡೆ ಸಮೂಹ ಸಾಮರ್ಥ್ಯ ಸಂಸ್ಥೆಯ ಸಹಾಯಕ ನಿರ್ದೇಶಕ ಎಚ್ ಎನ್ ಬಸಪ್ಪ, ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಪೂಜಾರಿ,ಕೊಪ್ಪಳ ಜಿಲ್ಲಾ ಅಧ್ಯಕ್ಷ ಅನ್ವರ್ ಪಟೇಲ್, ಪ್ರಧಾನ ಕಾರ್ಯದರ್ಶಿ, ವೀರೇಶ್ ಹಾಲುಗುಂಡಿ,ಎಂ ಆರ್ ಡಬ್ಲ್ಯೂಯು ಆರ್ ಡಬ್ಲ್ಯೂವಿ ಆರ್ ಡಬ್ಲ್ಯೂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಹೊಸ್ಕೆರಿ, ಕೋರ್ ಕಮಿಟಿ ಸದಸ್ಯರಾದ ಈರಣ್ಣ ಕರೆಕು ಉಪಸ್ಥಿತರಿದ್ದರು.